ಅರ್ಧ ಗಂಟೆಯಲ್ಲಿ ಹೊಳೆಯುವ ತ್ವಚೆ ನಿಮ್ಮದಾಗುತ್ತೆ..!

ದಿಢೀರ್ ಎಂದು ಸಂಜೆ ಫಂಕ್ಷನ್ ಗೆ ಹೋಗ್ಬೇಕು ಅಂದ್ರೆ ಫೇಶಿಯಲ್ ಗೆಂದು ಪಾರ್ಲರ್ ಗೆ ಹೋಗೋದು ಕಷ್ಟ, ಹೀಗಾಗಿ ಕಾಂತಿಯುತ ಹಾಗೂ ಮೃದುವಾದ ತ್ವಚೆಗಾಗಿ ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್ ತಯಾರಿಸಿ. ಕಾಂತಿಯುತ ತ್ವಚೆಗೆ ಸರಿಯಾದ ಆರೈಕೆ ಅವಶ್ಯಕವಾಗಿ ಬೇಕಾಗಿರುತ್ತದೆ. ದೈನಂದಿನ ತ್ವಚೆ ದಿನಚರಿಯ ಜೊತೆಗೆ ಕೆಲವು ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲೆ ಮ್ಯಾಜಿಕ್ ಮಾಡಬಹುದು. ಇದರಿಂದ ತ್ವಚೆಯಲ್ಲಿ ಕಾಂತಿ, ಚಿಮ್ಮುವುದಲ್ಲದೇ, ಮಾರುಕಟ್ಟೆಯಲ್ಲಿನ ಫೇಸ್ ಮಾಸ್ಕ್ ಗಳ ಹಣವೂ ಉಳಿಕೆಯುತ್ತೆ. ಹಾಗಾದರೆ  ಮನೆಯಲ್ಲೇ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಹಾಲು ಅತ್ಯುತ್ತಮವಾದ ಆಂಟಿ-ಟ್ಯಾನ್ ಏಜೆಂಟ್ ಆಗಿದ್ದು, ಮನೆಯಲ್ಲಿ ಸನ್ ಟ್ಯಾನ್ ಚಿಕಿತ್ಸೆಗಾಗಿ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. ಇದಲ್ಲದೆ ಹಸಿ ಹಾಲು ಲ್ಯಾಕ್ಟಿಕ್ ಆಮ್ಲವನ್ನು ಒಳಗೊಂಡಿದ್ದು, ಇದು ಚರ್ಮದ ಟೋನ್ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಅರಿಶಿನವು ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಚರ್ಮವನ್ನು ಹೊಳಪುಗೊಳಿಸಲು ಸಹಾಯ ಮಾಡುತ್ತದೆ.

ಬಳಸುವ ವಿಧಾನ:

ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಅರಿಶಿನ ಮತ್ತು ಹಸಿ ಹಾಲನ್ನು ಮಿಶ್ರಣ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ, ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ, ಅರ್ಧಗಂಟೆ ಬಿಡಿ ಬಳಿಕ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ವಾರಕ್ಕೆ 3-4 ಬಾರಿ ಹಚ್ಚಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

 

Leave a Reply

Your email address will not be published. Required fields are marked *

Next Post

ಶಾನ್ವಿ ಶ್ರೀವಾತ್ಸವ್ರ "ಕಸ್ತೂರಿ ಮಹಲ್ “ ಮೇ 13 ರಂದು

Mon Mar 28 , 2022
  ಇದು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ . ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದಿನೇಶ್ ಬಾಬು ನಿರ್ದೇಶನದ 50 ನೇ ಚಿತ್ರ “ಕಸ್ತೂರಿ ಮಹಲ್” . ಬಹುಭಾಷ ನಟಿ ಶಾನ್ವಿ ಶ್ರೀವಾತ್ಸವ್  ನಾಯಕಿಯಾಗಿ ನಟಿಸಿರುವ ಈ ಚಿತ್ರ  ಮೇ 13 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ದಿನಾಂಕ ತಿಳಿಸಲು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಧ್ಯಮದ ಜೊತೆಗೆ ಮಾತನಾಡಿದರು. ಕನ್ನಡದಲ್ಲಿ ಸಾಕಷ್ಟು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: