ಮುಂಬಡ್ತಿ ಪಡೆಯಲು ನಕಲಿ ಅಂಕಪಟ್ಟಿ ಹಿಂದೆ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಸೇವೆಯಿಂದ ವಜಾಗೊಳಿಸಲು ಸರಕಾರ ಸೂಚಿಸಿದೆ.
ನಕಲಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ 7 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹಾಗು ಸೇವೆಯಿಂದ ವಜಾಗೊಳಿಸಲು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಮಂಡ್ಯದ ಸಹಾಯ ಸಾಂಖ್ಯಿಕ ಅಧಿಕಾರಿ ಪುಟ್ಟರಾಜು. ಬೀದರ್ನ ಪ್ರಶಾಂತ್, ಅಶೋಕ್, ಅಬ್ದುಲ್ ರಬ್. ಬಾಲಾಜಿ ಬಿರಾದಾರ್, ರಾಜ ಕುಮಾರ. ಬಾಗಲಕೋಟೆ ಸತೀಶ್ ಕೆ.ನಾಯ್ಕ ಸೇರಿದಂತೆ ವಿವಿಧ ಜಿಲ್ಲೆಯ ಅಧಿಕಾರಿಗಳ ತಲೆತಂಡ ಸಾಧ್ಯತೆ ಇದೆ.
ನಿರ್ದೇಶನಾಲಯ ಹಂತದಲ್ಲಿ ನಿಯಮಗಳನ್ವಯ ಮುಂಬಡ್ತಿ ಪಡೆಯಲು ನಕಲಿ ಅಂಕಪಟ್ಟಿ ನೀಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆರ್ ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ಸಚಿವ ನಾರಾಯಣಗೌಡ ಅವರಿಗೆ ದೂರು ಸಲ್ಲಿಸಿದ್ದರು.
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದ್ದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಪದವಿ ನೈಜ್ಯತೆ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ 45 ಜನ ಅಧಿಕಾರಿಗಳ ಪದವಿ ನೈಜ್ಯತೆ ಪರಿಶೀಲನೆ ನಡೆದಿದ್ದು, 7 ಅಧಿಕಾರಿಗಳ ಪ್ರಮಾಣಪತ್ರ ನಕಲಿ ಎಂದು ಧೃಡಪಟ್ಟ ಹಿನ್ನೆಲೆಯಲ್ಲಿ ನಿಯಮಾನುಸಾರ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಸಭೆ ನಿರ್ಣಯಿಸಿತು.
ಸಹಾಯಕ ಸಾಂಖ್ಯಿಕ ಅಧಿಕಾರಿ, ಸಹಾಯಕ ನಿರ್ದೇಶಕ ವೃಂದಕ್ಕೆ ಬಡ್ತಿ ಪಡೆಯಲು ಅಧಿಕಾರಿಗಳು ರಾಜ್ಯದ ಪತಿಷ್ಠಿತ ವಿ.ವಿ ಹೊರತುಪಡಿಸಿ ಮಣಿಪುರದ ಶಾಂಘೈ, ಉತ್ತರ ಪ್ರದೇಶದ ಶ್ಯಾಂ ಹಿಗ್ಗಿನ್ ಬಾತಂ ಅಗ್ರಿಕಲ್ಚರ್, ಬಿಲಾಸ್ಪುರ್ನ ಸಿ.ವಿ. ರಾಮನ್, ತಮಿಳುನಾಡಿನ ವಿನಾಯಕ ಮಿಷನ್ ಸೇರಿದಂತೆ ಇನ್ನಿತರ ರಾಜ್ಯಗಳ ವಿ.ವಿ.ಗಳ ಪದವಿ ಪ್ರಮಾಣಪತ್ರ ಸಲ್ಲಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada