ತುಳುಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಪಂಚದ 11 ರಾಷ್ಟ್ರದಲ್ಲಿ ತುಳು ಚಿತ್ರ ಬಿಡುಗಡೆಯಾಗುತ್ತಿದೆ. ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಈ ಚಿತ್ರವನ್ನು ಯುವನಟ ರಾಹುಲ್ ಅಮೀನ್ ನಿರ್ದೇಶನ ಮಾಡಿದ್ದು,ಆನಂದ್ ಎನ್ ಕುಂಪಲ ನಿರ್ಮಾಪಕ ರಾಗಿದ್ದಾರೆ..ಸಿನಿಮಾ ದ ನಾಯಕ ನಟ ವಿನೀತ್ ಕುಮಾರ್ ಆಗಿದ್ದು,ಅವರೇ ಸಿನಿಮಾ ಕಥೆಯನ್ನು ಮಾಡಿದ್ದಾರೆ.ಚಿತ್ರ ಸಂಭಾಷಣೆ ಯನ್ನು ಪ್ರಸನ್ನ ಶೆಟ್ಟಿ ಬೈಲೂರು,ಛಾಯಾಗ್ರಹಣ ವನ್ನು ವಿಷ್ಣುಪ್ರಸಾದ್ ಮಾಡಿದ್ದಾರೆ.. ಸಂಗೀತ ನಿರ್ದೇಶನವನ್ನು ಸೃಜನ್ ಕುಮಾರ್ ತೋನ್ಸೆ,ನೃತ್ಯ ಸಂಯೋಜನೆಯನ್ನು ನವೀನ್ ಶೆಟ್ಟಿ ಮಾಡಿದ್ದಾರೆ..ಚಿತ್ರ ಕಥೆಯನ್ನು ವಿನೀತ್ ಕುಮಾರ್ ಮತ್ತು ರಾಹುಲ್ ಅಮೀನ್ ಬರೆದಿದ್ದಾರೆ..
ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ ಯಶ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾbಅಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್, ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಚಿಂಪು) ಹಾಗೂ ಇನ್ನಿತರ ಕಲಾವಿದರು ಮುಖ್ಯ ಭೂಮಿಕೆ ಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಶೋಕ್ ಕುಮಾರ್, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಇವರು ಸಹ ನಿರ್ಮಾಪಕರಾಗಿದ್ದಾರೆ. ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಮೇ 13,14,15 ರಂದು ಹಲವು ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಈ ಪ್ರೀಮಿಯರ್ ಶೋನ ಅಧೀಕೃತ ಉದ್ಘಾಟನೆ ಎಪ್ರಿಲ್ 24 ರಂದು ದುಬೈನಲ್ಲಿರುವ ಮಾರ್ಕೋ ಪೋಲೊ ಹೊಟೇಲ್ ನಲ್ಲಿ ನಡೆಯಲಿದೆ. ‘ರಾಜ್ ಸೌಂಡ್ಸ್ & ಲೈಟ್ಸ್’ ತುಳು ಚಲನಚಿತ್ರ ಯುಎಸ್ ಎ, ಲಂಡನ್, ಬಹ್ರೇನ್, ಕುವೈತ್, ನೈಜೀರಿಯಾ, ಜಾಂಬಿಯಾ, ಸೌದಿ ಅರೇಬಿಯಾ, ಇಸ್ರೇಲ್, ಕತಾರ್, ಯುಎಇ ಮತ್ತು ಒಮಾನ್ ರಾಷ್ಟ್ರಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಳ್ಳಲಿದೆ. ಅಲ್ಲದೇ ದೇಶದ ಆರು ಮಹಾನಗರದಲ್ಲೂ ಚಿತ್ರ ತೆರೆಕಾಣಲಿದೆ. ಮಂಗಳೂರು, ಬೆಂಗಳೂರು, ಮೈಸೂರು, ಬರೋಡಾ, ಪುಣೆ ಮತ್ತು ಮುಂಬೈ ನಗರದಲ್ಲಿ ಚಿತ್ರ ಪ್ರದರ್ಶನ ಆಗಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada