ಕಚಗುಳಿ ಇಟ್ಟ ‘ಕಂಬ್ಳಿ ಹುಳ” ಫರ್ಸ್ಟ್ ಲುಕ್ ಬಿಡುಗಡೆ…!

ಹೊಸಬರ ಪ್ರಯತ್ನಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಸಾಥ್ ನೀಡಿದ್ದರೆ. ಸ್ಯಾಂಡಲ್ ವುಡ್ ನಲ್ಲಿ ‘ಕಂಬ್ಳಿ ಹುಳ’ ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ಒಂದಷ್ಟು ರಂಗಭೂಮಿ ಕಲಾವಿದರು ಸೇರಿ ಅಭಿನಯಿಸುತ್ತಿರೋ ಕಂಬ್ಳಿ ಹುಳ ಸಿನಿಮಾದ ಫರ್ಸ್ಟ್ ಲುಕ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಿಂದೆ ಗೋಣಿಚೀಲ, ಜೋಡಿ ಕುದುರೆ ಎಂಬ ಕಿರುಚಿತ್ರ ಮಾಡಿ ಪ್ರಶಂಸೆ ಗಳಿಸಿರುವ ನವನ್ ಶ್ರೀನಿವಾಸ್ ಕಂಬ್ಳಿ ಹುಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಂಗಭೂಮಿ ಕಲಾವಿದರಾದ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದರೆ, ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ನೈಜ ಘಟನೆಯಾಧಾರಿತ ಕಂಬ್ಳಿ ಹುಳ ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸತೀಶ್ ರಾಜೇಂದ್ರನ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಜಿತೇಂದ್ರ ನಾಯಕ್ ಹಾಗೂ ರಾಘವೇಂದ್ರ ಸಂಕಲನ, ಹೊಸ ಪ್ರತಿಭೆ ಶಿವಪ್ರಸಾದ್ ಸಂಗೀತ ಸಿನಿಮಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

1800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಈ ದೇವಾಲಯ, ವಿಶೇಷ ದ್ವಾರಕ್ಕೆ 125 ಕೆಜಿ ಚಿನ್ನದಿಂದ ಅಲಂಕಾರ.!

Tue Mar 29 , 2022
ತೆಲಂಗಾಣದಲ್ಲಿ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯವೊಂದು ಲೋಕಾರ್ಪಣೆಗೊಂಡಿದೆ. ಈ ಭವ್ಯವಾದ ಮಂದಿರ ನಿರ್ಮಾಣಕ್ಕೆ ಕೆಜಿಗಟ್ಟಲೆ ಬಂಗಾರವನ್ನು ಬಳಸಲಾಗಿದೆ. ತೆಲಂಗಾಣದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಇದು. ಭಕ್ತರಿಗಾಗಿ ದೇವಾಲಯ ತೆರೆಯುವ ಮುನ್ನ ದೊಡ್ಡ ದೊಡ್ಡ ಯಜ್ಞ ಯಾಗಾದಿಗಳನ್ನು ಮಾಡಲಾಗಿದೆ. ಈ ದೇವಾಲಯ ತೆರೆಯುವ ಮುಹೂರ್ತವನ್ನು ಖುದ್ದು ಸಿಎಂ ಕೆಸಿ ಚಂದ್ರಶೇಖರ್‌ ರಾವ್‌ ಅವರ ಗುರೂಜಿ ಚಿನ್ನ ಜೀಯರ್‌ ಸ್ವಾಮೀಜಿ ಅವರೇ ನಿರ್ಧರಿಸಿದ್ದರು. ದೇವಾಲಯದ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: