ಬೆಂಗಳೂರು: ನೀಟ್ ಪರೀಕ್ಷೆ ಪಾಸಾದವರಿಗೆ ಸೀಟು ಸಿಗದಿರುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿ ಸಿದರು. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಅವರ ಆಯ್ಕೆಯ ಕಾಲೇಜಿನಲ್ಲಿ ಆಯ್ಕೆಯ ವಿಷಯದಲ್ಲಿ ಉನ್ನತ ವೈದ್ಯಕೀಯ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದ ಅಸಹಾಯಕವಾಗಿರುವ ಸ್ಥಿತಿ ಬಂದಿದೆ ಎಂದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಯನ್ನು ಮೆರಿಟ್ ಮತ್ತು ಮೀಸಲು ಅನ್ವಯ ನಡೆಸುತ್ತಿದೆ. ಇಲ್ಲಿಯವರೆಗೂ ನೀಟ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸೀಟು ದೊರಕಿದೆ. ಒಂದೊಮ್ಮೆ ದೊರೆತಿರುವ ಸೀಟು ಇಷ್ಟವಾಗದಿದ್ದಲ್ಲಿ ವಿದ್ಯಾರ್ಥಿ ಆಯ್ಕೆಗೆ ಅನುಸಾರವಾಗಿ ಕೋರ್ಸ್ ಬದಲಾಯಿಸಲು ಅವಕಾಶವಿರುತ್ತದೆ. ಇಲ್ಲಿಯವರೆಗೂ ಈ ರೀತಿಯ ಯಾವುದೇ ಸಮಸ್ಯೆ ರಾಜ್ಯದಲ್ಲಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Next Post
ತ್ವಚೆಯ ಕಾಂತಿ ಹೆಚ್ಚಿಸುವ ಎಳನೀರು
Tue Mar 22 , 2022
ಎಳನೀರಿನಲ್ಲಿರೋಗ ನಿರೋಧಕ ಶಕ್ತಿ ಇದೆಯಾ, ಕಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯೊದು ಉತ್ತಮನಾ, ತ್ವಚೆಯ ಕಾಂತಿ ಹೆಚ್ಚಿಸುತ ಎಳನೀರು, ತೆಂಗನ್ನು ಕಲ್ಪವೃಕ್ಷ ಎಂದು ಕರೆದಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ತೆಂಗಿನ ಪ್ರತಿ ಭಾಗವೂ ಉಪಯುಕ್ತವೇ ಹೌದು. ಆರೋಗ್ಯದ ವಿಷಯಕ್ಕೆ ಬಂದಾಗ ತೆಂಗಿನ ತಿರುಳು, ನೀರು ಮತ್ತು ತೈಲ, ಇವೆಲ್ಲವೂ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಕೊಬ್ಬರಿ ಎಣ್ಣೆಯಂತೂ ತ್ವಚೆ, ಕೇಶ ಹಾಗೂ ಜೀರ್ಣಾಂಗಗಳಿಗೆ ನೀಡುವ ಪ್ರಯೋಜನಗಳ ಭಂಡಾರವನ್ನೇ ಒದಗಿಸುತ್ತದೆ. ಎಳನೀರು ಈ […]
You May Like
-
11 months ago
ಎಲ್ಪಿಜಿ, ಸಿಎನ್ಜಿ, ಪಿಎನ್ಜಿ ಗ್ಯಾಸ್ ಬೆಲೆಯೂ ದುಬಾರಿ!
-
10 months ago
2ನೇ ಮದುವೆಗೆ ಸಿದ್ಧರಾದ್ರ ಐಎಎಸ್ ಟಾಪರ್ ಟಿನಾ…!
-
11 months ago
ಭಾರತಕ್ಕೂ ಬರಬಹುದು ನಾಲ್ಕನೇ ಅಲೆ
-
11 months ago
ಕಡಲೆಕಾಯಿ ಬೀಜ…( ಶೇಂಗಾ )ಇಷ್ಟಪಡದವರುಂಟೇ….???