ಸ್ಯಾಂಡಲ್ವುಡ್ ಯುವರಾಜ, ಕರುನಾಡ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಬರೋಬ್ಬರಿ 6 ತಿಂಗಳುಗಳು ಕಳೆದಿವೆ. ಪುನೀತ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇದ್ದರೂ ಭಾವನಾತ್ಮಕವಾಗಿ ಪ್ರತಿಯೊಬ್ಬರಲ್ಲೂ ಬೆರೆತುಹೋಗಿದ್ದಾರೆ.. ಮನೆ ಮಗನಂತೆ ಕರ್ನಾಟಕದ ರಾಜರತ್ನ ನನ್ನ ಜನ ಇಂದಿಗೂ ಆರಾಧನೆ ಮಾಡುತ್ತಲೇ ಬಂದಿದ್ದಾರೆ.. ಪವರ್ ಸ್ಟಾರ್ ಹುಟ್ಟುಹಬ್ಬದ ದಿನ ಅಪ್ಪು ಕಡೆಯ ಕಮರ್ಷಿಯಲ್ ಸಿನಿಮಾ ಜೇಮ್ಸ್ ಸಿನಿಮಾ ತೆರೆಕಂಡಿತ್ತು. ಇದು ಅಪ್ಪು ಅಭಿಮಾನಿಗಳಿಗೆ ಇದು ಕೇವಲ ಒಂದು ಸಿನಿಮಾ ಆಗಿರಲಿಲ್ಲ. ಜೇಮ್ಸ್ ಜಾತ್ರೆ ಮಾಡಿ ಸಂತಸ ಪಟ್ಟಿದ್ದರು. ಇನ್ನೂ ಅಪ್ಪು ಗಂಧದ ಗುಡಿ ಸಿನಿಮಾ ಕೂಡ . ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇದು ಕಮಷಿರ್ಯಲ್ ಸಿನಿಮಾ ಅಲ್ಲ. ಕಾಡು ಮೇಡಿನ ಕಾಡು ಅಲೆದು ಅಪ್ಪು ಡಾಕ್ಯುಮೆಂಟರಿ ಮಾಡಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್ ಅಪಡೇಟ್ ಸಿಕ್ಕಿದೆ.
ಶೀಘ್ರವೇ ಗಂಧದ ಗುಡಿಯಲ್ಲಿ ಅಪ್ಪು ದರ್ಶನ!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada