ತಲೆಹೊಟ್ಟು ನಿವಾರಣೆಗೆ ಶುಂಠಿ ಉಪಯೋಗಿಸಿ..!

 

ಶುಂಠಿ ಬಹು ಉಪಯೋಗಿ. ಕೆಲವರು ಶುಂಠಿ ಚಹಾ ಸೇವಿಸ್ತಾರೆ, ಅಡುಗೆಗೆ ಬಳಸ್ತಾರೆ. ಕೆಮ್ಮು, ನೆಗಡಿ, ಅಜೀರ್ಣಕ್ಕೂ ಶುಂಠಿ ಉತ್ತಮ ಮದ್ದು. ಆದ್ರೆ ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ? ಅದ್ಹೇಗೆ ಅನ್ನೋದನ್ನು ನೋಡೋಣ.

ಬೇಸಿಗೆಯಲ್ಲಿ ಧೂಳಿನಿಂದಾಗಿ ಕೂದಲಲ್ಲಿ ಕೊಳೆ, ತಲೆಹೊಟ್ಟು ಶುರುವಾಗುತ್ತೆ. ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡಿದ್ರೂ ತುರಿಕೆ ಹೆಚ್ಚಾಗಿರುತ್ತದೆ. ಇದನ್ನೆಲ್ಲ ಹೋಗಲಾಡಿಸಲು ಶುಂಠಿ ಪರಿಣಾಮಕಾರಿ. ಇದನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಚ್ಚಿಕೊಳ್ಳಬಹುದು. ನೀವು ಎಣ್ಣೆಯೊಂದಿಗೆ ಶುಂಠಿಯನ್ನು ಬೆರೆಸಿ ಬಳಸಬಹುದು.

ನಿಮ್ಮ ನೆತ್ತಿಯ ಚರ್ಮವು ಸೂಕ್ಷ್ಮವಾಗಿದ್ದರೆ, ಶುಂಠಿ ರಸವನ್ನು ನೇರವಾಗಿ ಹಚ್ಚಲು ಹಿಂಜರಿಕೆಯಿದ್ದರೆ ಅದನ್ನು ಎಣ್ಣೆಯ ಜೊತೆಗೆ ಮಿಕ್ಸ್ಮಾಡಿ. ನಂತರ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ರೀತಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದಲ್ಲದೆ, ಒಂದು ಚಮಚ ಶುಂಠಿ ರಸಕ್ಕೆ ಸ್ವಲ್ಪ ಸಲ್ಫೇಟ್ಮುಕ್ತ ಶಾಂಪೂ ಮಿಕ್ಸ್ಮಾಡಿ. ಅದನ್ನು ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡಿ. ರೀತಿ ಮಾಡುವುದರಿಂದಲೂ ತಲೆಹೊಟ್ಟು ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ಕೂದಲಿನ ಕೊಳೆಯೂ ಸ್ವಚ್ಛವಾಗುತ್ತದೆ. ಕೂದಲು ಕೂಡ ಕಾಂತಿಯುಕ್ತವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

"ತನುಜಾ" ಸಿನಿಮಾಕ್ಕೆ ಡಾ.ಕೆ ಸುಧಾಕರ್ ಎಂಟ್ರಿ .!

Thu Apr 7 , 2022
  ಮಾಜಿ ಸಿಎಂ ಯಡಿಯೂರಪ್ಪ ನಂತರ “ತನುಜಾ” ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .! ನೈಜ ಘಟನೆಯಾಧಾರಿತ ತನುಜಾ ಸಿನಿಮಾದ ಕಥೆಗೆ ಮನಸೋತು  ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿ ದೇಶದಾದ್ಯಂತ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: