ಮ್ಯಾಟ್ರಿಮೊನಿ ಸೈಟ್ನಲ್ಲಿ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ತರುಣ್ ಕುಮಾರ್, ಅವರ ಸ್ನೇಹ ಸಂಪಾದಿಸುತ್ತಿದ್ದ. ಮದುವೆ ವಿಚಾರದಲ್ಲಿ ಅವರಲ್ಲಿ ಕನಸು ಬಿತ್ತುತ್ತಿದ್ದ. ತಾನು ಒಳ್ಳೆಯವನಂತೆ ಪೋಸ್ ಕೊಡುತ್ತಿದ್ದ. ಬಳಿಕ ಅವರ ಆರ್ಥಿಕ ಸ್ಥಿತಿ ವಿಚಾರಿಸಿ, ಬಲೆ ಬೀಸುತ್ತಿದ್ದ.
“ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ” ಅಂತಾರೆ ಹಿರಿಯರು. ಆದ್ರೆ ಈ ಮಹಾನುಭಾವ ಹೋದ ಹೋದ ಊರಿನಲ್ಲೆಲ್ಲ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದ. “ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಬೇಕು” ಅಂತಾರೆ. ಆದ್ರೆ ಈತ ಮಾತ್ರ ಸಾವಿರ ಸುಳ್ಳು ಹೇಳಿ, ಹೋದಲ್ಲಿ, ಬಂದಲ್ಲೆಲ್ಲಾ ಒಂದೊಂದು ಮದುವೆ ಆಗುತ್ತಿದ್ದ. ಮದುವೆ ಹೆಸರನ್ನು ಹುಡುಗಿಯರನ್ನುನಂಬಿಸಿ, ಅವರನ್ನು ಮದುವೆ ಆಗಿ, ಸಂಸಾರ ಮಾಡಿ, ಆಮೇಲೆ ಎಸ್ಕೇಪ್ ಆಗ್ತಿದ್ದ. ಹೀಗೆ ಈತ ವಂಚಿಸಿದ್ದು ಒಂದೆರಡು ಮಹಿಳೆಯರನ್ನಲ್ಲ, ಬದಲಾಗಿ ಬರೋಬ್ಬರಿ 200 ಮಹಿಳೆಯರಿಗೆ ಈತ ಮದುವೆ ಹೆಸರಲ್ಲಿ ಮೋಸ ಮಾಡಿದ್ದಾನೆ. ಇದೀಗ ಈ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada