ಜಿಮ್ ನಲ್ಲಿ ಮಹಿಳೆಯ ಸಾವು ಪ್ರಕರಣ: ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್ ರಿಪೋರ್ಟ್..!

ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಾವಿನ ಕಾರಣವು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಜಿಮ್​ನಲ್ಲಿ ಮೃತಪಟ್ಟಿದ್ದ ಬಗ್ಗೆ ಕಾರಣ ಬಹಿರಂಗವಾಗಿದೆ.

ಇದೀಗ ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗಿದೆ. ಸಿವಿ ರಾಮನ್ ಆಸ್ಪತ್ರೆ ವೈದ್ಯರಿಂದ ಪೋಸ್ಟ್ ಮಾರ್ಟಂ ವರದಿ ನೀಡಲಾಗಿದೆ. ಅದರಂತೆ, ಕೋಮಾದ ಪರಿಣಾಮವಾಗಿ ಸಾವು ಸಂಭವಿಸಿದೆ. ಮೆದುಳಿನ ರಕ್ತನಾಳದ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಆಗಿದೆ. ಅದರಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ಇರುವಾಗಲೇ ಕುಸಿದು ಬಿದ್ದಿದ್ದ ಯುವತಿ ಸಾವನ್ನಪ್ಪಿದ್ದರು. ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್​ನಲ್ಲಿ ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಾರ್ಚ್ 26 ರಂದು ಘಟನೆ ನಡೆದಿತ್ತು. ಜಿಮ್ ವರ್ಕ್ ಔಟ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ ವಿನಯಾ, ಅವರು ಜಿಮ್​​ನಲ್ಲಿ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಕೂಡ ರೆಕಾರ್ಡ್ ಆಗಿತ್ತು.

ಜಿಮ್​ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗ ಸಾವನ್ನಪ್ಪುವ ಬಗ್ಗೆ ಹಲವು ಅಭಿಪ್ರಾಯಗಳು ಜನರಲ್ಲಿ ಇವೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡ ಜಿಮ್​ಗೆ ತೆರಳಿದ್ದ ವೇಳೆ ಮೃತಪಟ್ಟಿದ್ದರು. ಆಗಲೂ ಅತಿಯಾದ ವರ್ಕ್ ಔಟ್ ಮಾಡುವ ಬಗ್ಗೆ ಹಲವು ಮಾಹಿತಿಗಳು, ಪ್ರಶ್ನೆಗಳು ಜನರ ಮನಸಲ್ಲಿ ಮೂಡಿತ್ತು. ಈ ಘಟನೆಯೂ ಅದಕ್ಕೆ ಪೂರಕ ಎಂಬಂತೆ ನಡೆದಿತ್ತು. ಜಿಮ್​ನಲ್ಲಿ ವರ್ಕ್ ಔಟ್ ಮಾಡುತ್ತಲೇ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.

ರಕ್ತದ ಒತ್ತಡ ಉಂಟಾಗಿ ಮೆದುಳಿನಲ್ಲಿ ಬ್ಲಡ್ ಪ್ರೆಶರ್ ಆಗಿದೆ

ಮಾರ್ಚ್ 26 ರಂದು ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಜಿಮ್​ನಲ್ಲಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ ಹೇಳಿಕೆ ನೀಡಿದ್ದಾರೆ. ಯುವತಿ ಜಿಮ್​ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಭಾರವಾದ ವಸ್ತುವನ್ನು ಲಿಫ್ಟ್ ಮಾಡಿದ್ದಾರೆ. ಈ ವೇಳೆ ರಕ್ತದ ಒತ್ತಡ ಉಂಟಾಗಿ ಮೆದುಳಿನಲ್ಲಿ ಬ್ಲಡ್ ಪ್ರೆಶರ್ ಉಂಟಾಗಿದೆ. ಮೆದುಳಿನಲ್ಲಿ ಒತ್ತಡದಿಂದ ರಕ್ತನಾಳಗಳು ಒಡೆದು, ರಕ್ತಸ್ರಾವವಾಗಿ ಕೋಮಾಗೆ ಹೋಗಿದ್ದಾರೆ. ಬಳಿಕ ಯುವತಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಯುವತಿ ಮೂಲತಃ ಮಂಗಳೂರು ನಿವಾಸಿ :
ಮೃತ ಯುವತಿ ಮೂಲತಃ ಮಂಗಳೂರು ನಿವಾಸಿ. ಖಾಸಗಿ ಕಂಪೆನಿಯಲ್ಲಿ ಬ್ಯಾಕ್​​ ಗ್ರೌಂಡ್ ವೆರಿಫಿಕೇಷನ್ ಅಫೀಸರ್ ಆಗಿ ಕೆಲಸ ಮಾಡ್ತಿದ್ದರು. 35 ವರ್ಷದ ಅವಿವಾಹಿತ ವಿನಯ ಕುಮಾರಿ ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದು ಎರಡು ವರ್ಷಗಳಿಂದ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದ ವಿನಯ ಕುಮಾರಿ ಬೆಳಗ್ಗೆ ವೇಳೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಿ, ಕೆಲಸಕ್ಕೆ ತೆರಳುತ್ತಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ವೆಡ್ಡಿಂಗ್ ಶೂಟ್ ತಂದ ಆಪತ್ತು: ನದಿಯಲ್ಲಿ ಮುಳುಗಿ ಮದುಮಗ ಸಾವು..!

Tue Apr 5 , 2022
ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಭಾರಿ ದುರಂತ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕೇರಳದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ಈ ಘಟನೆ ನಡೆದಿದೆ. ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್​​ 14ರಂದು ರೆಜಿಲ್​ ಮತ್ತು ಕಾರ್ತಿಕಾ ಮದುವೆಯಾಗಿತ್ತು. ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ಗಾಗಿ ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: