ಗಂಡ ಹೆಂಡತಿ ಎಂದ ಮೇಲೆ ನೂರೆಂಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಹಿರಿಯರು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಭೋಧಿಸಿದ್ದಾರೆ. ಆದರೆ ಇಂದು ಪರಿಸ್ಥತಿ ಬದಲಾಗುತ್ತಿದೆ. ಸತಿ ಪತಿಗಳ ಮಧ್ಯದಲ್ಲಿ ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ. ಆದರೆ ಕೇವಲ ಒಂದು ಜ್ಯೂಸ್ ಕುಡಿಯಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತ್ನಿಯು ಕೌಟುಂಬಿಕ ಸಲಹಾ ಕೇಂದ್ರಕ್ಕೆ ದೂರು ನೀಡಿರುವುದು ನೀವಂದಾದರೂ ಕೇಳಿದ್ದೀರಾ….? ಇಂತಹ ಒಂದು ವಿಚಿತ್ರ ಕೇಸ್ ಅನ್ನು ಆಗ್ರಾ ಪಟ್ಟಣದ ಕುಟುಂಬ ಸಲಹಾ ಕೇಂದ್ರವು ಎದುರಿಸಬೇಕಾಯಿತು.
ಗಂಡನ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದ ಹೆಂಡತಿ ಆತನಿಗೆ ಹಾಗಲಕಾಯಿ ಜ್ಯೂಸ್ ಕುಡಿಯಲು ಒತ್ತಾಯಿಸಿದಳು ಆದರೆ ಜ್ಯೂಸ್ ಕುಡಿಯಲು ಗಂಡ ನಿರಾಕರಿಸಿದನು ಹೀಗೆ ಅವರಿಬ್ಬರ ಮಧ್ಯೆ ಏರ್ಪಡುತಿತ್ತು. ಇದರಿಂದ ಕೋಪಗೊಳ್ಳುತ್ತಿದ್ದ ಗಂಡ ಅವನ ಮನೆಯವರ ಬೆಂಬಲವನ್ನೂ ಪಡೆದು ಆಕೆಯ ವಿರುದ್ದ ಜಗಳ ಮಾಡುತ್ತಿದ ಜ್ಯೂಸ್ ಕುಡಿಯುತ್ತಿರಲಿಲ್ಲ. ಎಂದು ಹೆಂಡತಿ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ತನ್ನ ಪತಿ ವಿರುದ್ದ ಪೊಲೀಸ್ ಠಾಣೆ ಏರಿದ್ದಾಳೆ. ಆ ಪ್ರಕರಣವು ಕೌಟುಂಬಿಕ ಸಲಹಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿದುಬಮದಿದೆ.
ಈ ಪ್ರಕರಣದಲ್ಲಿ ಕುಟುಂಬ ಸಲಹಾ ಕೇಂದ್ರವು ಗಂಡ ಹೆಂಡತಿ ಇಬ್ಬರಿಗೂ ತಿಂಗಳುಗಳ ಕಾಲ ಕೌನ್ಸೆಲಿಂಗ್ ಮಾಡಿದ್ದಾರೆಂದು ತಿಳಿದು ಬಂದಿದೆ. ಅಸಲಿಗೆ ಗಂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಅದಕ್ಕಾಗಿ ಅವನ ಹೆಂಡತಿ ಅವನ ಆರೋಗ್ಯದ ಮೇಲಿನ ಕಾಳಜಿಯಿಂದ ಹಾಗಲಕಾಯಿ ಜ್ಯೂಸ್ ಕುಡಿಯಲು ಆಗ್ರಯಿಸುತ್ತಿದ್ದಳು. ಅದು ಗಂಡನಿಗೆ ಇಷ್ಟವಿರಲಿಲ್ಲ ಕೌನ್ಸೆಲಿಂಗ್ ನಡೆದ ಬಳಿಕ ಪತಿಯು ತನ್ನದೆ ತಪ್ಪಾಗಿದೆ ಎಂದು ಇನ್ನು ಮುಂದೆ ನಾನು ಜಗಳ ಮಾಡದೆ ಹಾಗಲಕಾಯಿ ಜ್ಯೂಸ್ ಕುಡಿಯುವುದಾಗಿ ಹೇಳಿದ್ದಾನೆ. ನಂತರ ಸತಿ ಪತಿಗಳಿಬ್ಬರು ಒಂದಾಗಿ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada