ಚಿತ್ರದುರ್ಗ: ಕ್ರೀಡಾ ಲೋಕದಲ್ಲಿ ಡೈನಾಮಿಕ್ ಆಟ ಎಂದು ಕರೆಯುವ ಹ್ಯಾಂಡ್ಬಾಲ್ನಲ್ಲಿ ಚಿತ್ರದುರ್ಗದ ಸಾನಿಯಾ ಅವರದು ಅಭೂತಪೂರ್ವ ಸಾಧನೆ. ಪ್ರಾಥಮಿಕ ತರಗತಿ ಹಂತದಲ್ಲೇ ಹ್ಯಾಂಡ್ಬಾಲ್ ಸ್ಪರ್ಶಿಸಿದ ಕೈಗಳು ಪದವಿಯಲ್ಲೂ ಜತೆಯಾಗಿದೆ.
ಹಿಮ್ಮತ್ ನಗರದ ನಿವಾಸಿಯಾದ ದಾದಾಪೀರ್, ಸಾಹಿರಾ ಬಾನು ದಂಪತಿಯ ಪುತ್ರಿ ಸಾನಿಯಾ ಪ್ರಾಥಮಿಕ ಶಿಕ್ಷಣಕ್ಕೆಂದು ನಗರದ ವಿಪಿ ಬಡಾವಣೆಯ ಸರ್ಕಾರಿ ಶಾಲೆಗೆ ಪ್ರವೇಶ ಪಡೆದಿದ್ದರು. ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹ್ಯಾಂಡ್ಬಾಲ್ ಬಗ್ಗೆ ಕುತೂಹಲ ಮೂಡಿ ದೈಹಿಕ ಶಿಕ್ಷಣ ಶಿಕ್ಷಕ, ತರಬೇತುದಾರ ಕೆ.ಎಚ್. ಶಿವರಾಮು ಮಾರ್ಗದರ್ಶನದಲ್ಲಿ
ಬಾಲ್ ಹಿಡಿದು ಮೈದಾನಕ್ಕಿಳಿದಿದ್ದರು. ಇಂದು ರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಸಾನಿಯಾ ಅವರು ವಿಪಿ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿದ್ಯಾ ಭಾರತಿ ವಿದ್ಯಾ ಮಂದಿರದಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಓದುವಾಗ 2021ರಲ್ಲಿ ಲಖನೌದಲ್ಲಿ ನಡೆದ 20