ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮೊಹಮ್ಮದ್ ನಲಪಾಡ್ ಅವರ ಒಡೆತನದ ರೆಸ್ಟೋರೆಂಟ್ ನಲ್ಲಿ ಮಹಿಳೆ ಯೊಬ್ಬರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಿದ ಕುರಿತು ಪ್ರಕರಣ ದಾಖಲಾಗಿದ್ದು, ಘಟನೆಯ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.ನಲಪಾಡ್ ರೆಸ್ಟೋರೆಂಟ್ ಕಟ್ಟಡದಲ್ಲಿ ಕೇಸರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಹಿಳೆ ಕೃತಿಕಾ ಗೌಡ ಎನ್ನುವವರನ್ನು ರೆಸ್ಟೋರೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಿಯಾಜ್ ಅಹಮದ್ ಹಲ್ಲೆ ಮತ್ತು ತಳ್ಳಾಟ ನಡೆಸಿದ್ದಾರೆ.ಮೊಹಮ್ಮದ್ ನಲಪಾಡ್ ಅವರ ಒಡೆತನಕ್ಕೆ ಸೇರಿರುವ ನಲಪಾಡ್ ರೆಸ್ಟೋರೆಂಟ್ ನಲ್ಲಿ ಕೃತಿಕಾ ಗೌಡ 3 ವರ್ಷ ಅಗ್ರಿಮೆಂಟ್ ಮಾಡಿಕೊಂಡಿದ್ದು, ಒಂದೇ ವರ್ಷಕ್ಕೆ ಖಾಲಿ ಮಾಡಿಸಲು ದಬ್ಬಾಳಿಕೆ ನಡೆಸಲಾಗಿದೆ ಎಂದು ಹೇಳಲಾಗಿದೆ.ಮೈಸೂರಿನ ಎನ್.ಆರ್. ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada