ಮಿಸ್ ಯೂನಿವರ್ಸ್ 2021ರಪಟ್ಟ ಮುಡಿಗೇರಿಸಿಕೊಂಡ ಹರ್ನಾಜ್ ಸಂಧು ಹೊಸದೊಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಭುವನ ಸುಂದರಿ ಬಹಿರಂಗಪಡಿಸಿದ್ದಾರೆ. ಹರ್ನಾಜ್ ಸಂಧು ಗ್ಲುಟೆನ್ ಹೊಂದಿರುವ ಆಹಾರಗಳಿಂದ ಉಂಟಾಗುವ ರೋಗನಿರೋಧಕ ಅಸ್ವಸ್ಥತೆಯಾದ ಸೆಲಿಯಾಕ್ ಕಾಯಿಲೆಯನ್ನು ಹೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹೆಚ್ಚುತ್ತಿರುವ ತೂಕಕ್ಕಾಗಿ ಟ್ರೋಲ್ ಆಗುವ ಬಗ್ಗೆ ಮಾತನಾಡಿದ್ದಾರೆ.
ಚಂಡೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂಧು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯ ವಿಜೇತೆ ನಂತರ ಮಹಿಳೆಯಾಗಿ ತನ್ನ ವೈಯಕ್ತಿಕ ಹೋರಾಟಗಳ ಬಗ್ಗೆಯೂ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ನಾನು ತುಂಬಾ ತೆಳ್ಳಗಿದ್ದೇನೆ ಎಂದು ಮೊದಲು ಹೆದರಿದ ವ್ಯಕ್ತಿಗಳಲ್ಲಿ ನಾನು ಒಬ್ಬಳು ಮತ್ತು ಈಗ ಬೇರೆಯವರು “ಅವಳು ದಪ್ಪವಾಗಿದ್ದಾಳೆ” ಎಂದು ನನ್ನನ್ನು ಬೆದರಿಸುತ್ತಿದ್ದಾರೆ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.
“ನನ್ನ ಸೆಲಿಯಾಕ್ ಕಾಯಿಲೆಯ ಬಗ್ಗೆ ಯಾರಿಗೂ ತಿಳಿದಿಲ್ಲ” ಅಂತ ಭುವನ ಸುಂದರಿ ಹರ್ನಾಜ್ ಸಂಧು ತಮ್ಮ ಕಾಯಿಲೆ ಬಗ್ಗೆ ತಿಳಿಸಿದ್ದಾರೆ. ಅದರಿಂದಲೇ ನಾನು ದಪ್ಪಗಾಗುತ್ತಿದ್ದೇನೆ ಅಂತ ಹೇಳಿದ್ದಾರೆ.