60 ದಾಟಿದ ಹಿರಿಯರಿಗೆ ನೀಡುವ ʻ ಆಹಾರ ಪದ್ದತಿ ʼ

 

 

ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಕ್ಷೀಣಿಸುತ್ತಾ ಬರುತ್ತದೆ. ಇದರ ಜೊತೆ ಜೀರ್ಣಕ್ರಿಯೆಯು ನಿಧಾನಗೊಳಿಸುತ್ತದೆ. ಏನು ತಿನ್ನಬೇಕು? ಎಷ್ಟು ಪ್ರಮಾಣ ತಿನ್ನಬೇಕು? ಎಂಬುದು ಗೊಂದಲವನ್ನು ಸೃಷ್ಟಿಸುತ್ತದೆ.ವಿಶ್ವದಲ್ಲಿರುವ ಬಹುತೇಕ ತಜ್ಞರು ವಯಸ್ಸಾದವರಿಗೆ ಕಾಳಜಿಯ ಅಗತ್ಯವಿದೆ ಎಂದು ಹೇಳುತ್ತಾರೆ . ಅವರ ಆಹಾರದ ಮೇಲೆ ಹೆಚ್ಚು ನಿಗಾ ವಹಿಸಬೇಕು. ಹಾಗಾದರೆ 60 ದಾಟಿದ ಹಿರಿಯರಿಗೆ ಎಂತಹ ಆಹಾರಗಳನ್ನು ನೀಡಬೇಕೆಂದರೆ  ​ಮೊಟ್ಟೆ,ಮೀನು ಮುಖ್ಯವಾಗಿ ಮೀನಿನ ಜಾತಿಗಳಾದ ಸಾಲ್ಮನ್‌, ಸಾರ್ಡೀನ್‌, ಟ್ಯೂನ ಮತ್ತು ಟ್ರೌಟ್‌ಗಳಂತಹ ಕೊಬ್ಬಿನ ಮೀನುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಶ್ರೀಮಂತವಾಗಿರುವುದರಿಂದ ಮೆದುಳನ್ನು ಆರೋಗ್ಯಕರವಾಗಿಡುತ್ತದೆ.  ವಯಸ್ಸಾದ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ವಾರಕ್ಕೆ 2 ಬಾರಿ ಕೊಬ್ಬಿನ ಮೀನುಗಳನ್ನು ಸೇವನೆ ಮಾಡಬೇಕು ಸಾಮಾನ್ಯವಾಗಿ 60 ರ ನಂತರ ಮಧುಮೇಹಕ್ಕೆ ಹೆದರಿ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ ಅಕ್ಕಿ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಸಾಮಾನ್ಯವಾಗಿ 60 ರ ನಂತರ ಚಯಾಪಚಯ ಕ್ರಿಯೆಯು ನಿಧಾನವಾಗಿರುತ್ತದೆ. ಅಂತವರು ಅನ್ನವನ್ನು ದಿನಕ್ಕೆ 2 ಬಾರಿ ಊಟ ಮಾಡಿ. 60 ರ ನಂತರ ಈ ಹಣ್ಣುಗಳು ಸೇವನೆ ಮಾಡುವುದು ಒಳ್ಳೆಯದು. ಬೆರ್ರಿ,  ಬ್ಯೂ ಬೆರ್ರಿ, ಕ್ರಾನ್‌ ಬೆರ್ರಿ ಮತ್ತು ಸ್ಟ್ರಾಬೆರಿಗಳಂತಹ  ಹಣ್ಣುಗಳಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ ಪ್ರತಿನಿತ್ಯ ಸೇವನೆ ಮಾಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಎಸ್.ಎಸ್.ಎಲ್.ಸಿ ಪರೀಕ್ಷೆ ಇಂದಿನಿಂದ: ಸಮವಸ್ತ್ರ ಕಡ್ಡಾಯ, ಹಿಜಾಬ್‌ಗಿಲ್ಲ ಅವಕಾಶ

Mon Mar 28 , 2022
ಹಿಜಾಬ್‌ ಹಾಗೂ ಸಮವಸ್ತ್ರಕ್ಕೆ ಸಂಬಂಧಿಸಿದ ಗೊಂದಲಗಳ ನಡುವೆಯೇ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರ ರಾಜ್ಯದಾದ್ಯಂತ ಆರಂಭವಾಗಲಿವೆ. ಏ. 11ರವರೆಗೆ ನಡೆಯಲಿರುವ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎರಡು ವರ್ಷ ಕೋವಿಡ್‌ನಿಂದಾಗಿ ಪರೀಕ್ಷೆಯಲ್ಲಿ ಕೆಲ ಮಾರ್ಪಾಡುಗಳನ್ನುಮಾಡಲಾಗಿತ್ತು. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. 8.73 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 4,52,732 ಬಾಲಕರು, 4,21,110 ಬಾಲಕಿಯರು, ನಾಲ್ವರು ತೃತೀಯ ಲಿಂಗಿಗಳು, 4,618 […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: