ತ್ವಚೆಯ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ..!

ಹೊರಗಿನ ಧೂಳು, ಅಥವಾ ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ತ್ವಚೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.

ಇದಕ್ಕೆ ಮಾರ್ಕೆಟ್ ನಿಂದ ತಂದ ಕೆಮಿಕಲ್ ಯುಕ್ತ ಕ್ರಿಂ, ಫೇಸ್ ವಾಶ್ ಗಳನ್ನು ಉಪಯೋಗಿಸುವ ಬದಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು.

ಕಡಲೆಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು. ಹಾಗೇ ಅರಿಶಿನ ಕೂಡ ನಿಮ್ಮ ಮುಖದಲ್ಲಿನ ಕಲೆಯನ್ನು ನಿವಾರಿಸುತ್ತದೆ. ಹಾಗೇ ಮೊಡವೆಯನ್ನು ಕಡಿಮೆ ಮಾಡುತ್ತದೆ. 2 ಚಮಚ ಕಡಲೆಹಿಟ್ಟಿಗೆ 1 ಟೀ ಸ್ಪೂನ್ ಅರಿಶಿನ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಿರಿ. ಅರಿಶಿನ, ಕಡಲೆಹಿಟ್ಟು ಆಗದವರು ಹೆಸರಿಟ್ಟು ಉಪಯೋಗಿಸಿ.

ಹಸಿ ಹಾಲು ಕೂಡ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯಕಾರಿ. ಹಾಗೇ ಇದು ಮುಖದ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಹಸಿ ಹಾಲನ್ನು ತೆಗೆದುಕೊಂಡು ಇದರಿಂದ ಮುಖಕ್ಕೆ ಮಸಾಜ್ ಮಾಡಿಕೊಂಡು 10 ನಿಮಿಷಗಳ ಕಾಲ ಹಾಗೇಯೇ ಬಿಟ್ಟು ನಂತರ ತೊಳೆಯಿರಿ. ಹಾಗೇ ಹಸಿ ಹಾಲಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಮುಖಕ್ಕೆ ನಿಧಾನಕ್ಕೆ ಮಸಾಜ್ ಮಾಡಿದರೆ ಮುಖದ ತ್ವಚೆ ಅಂದವಾಗುತ್ತದೆ.

ಸೌತೆಕಾಯಿ ಹಾಗೂ ಮೊಸರು ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. 3 ತುಂಡು ಸೌತೆಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನಯವಾಗಿ ರುಬ್ಬಿಕೊಳ್ಳಿ ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಪ್ಯಾಕ್ ರೀತಿ ಹಾಕಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಉಗುರುಗಳ ಮೇಲೆ ಬಿಳಿ ಚುಕ್ಕೆ ಕಾಣಿಸಿದ್ರೆ ಹುಷಾರ್..!

Thu Apr 7 , 2022
ಒಬ್ಬರ ಕಾಲು ಅಥವಾ ಕೈಗಳ ಉಗುರುಗಳ ಮೇಲೆ ಬಿಳಿ ಕಲೆಗಳು ಅಥವಾ ಗುರುತುಗಳು ಕಂಡು ಬರುವುದನ್ನು ಲ್ಯುಕೋನಿಚಿಯಾ ಎಂದು ಕರೆಯುತ್ತಾರೆ. ಇದರ ಹಿಂದೆ ಕೆಲವು ಆರೋಗ್ಯ ಸಮಸ್ಯೆಯ ಕಾರಣಗಳಿರಬಹುದು. ಯಾರಿಗಾದರೂ ಕಾಯಿಲೆ ಬಂದರೆ ವೈದ್ಯರ ಬಳಿ ಹೋಗುತ್ತಾರೆ. ಪರೀಕ್ಷೆಯ ಸಮಯದಲ್ಲಿ, ವೈದ್ಯರು ಹೆಚ್ಚಾಗಿ ರೋಗಿಯ ಉಗುರು ಗಳನ್ನು ನೋಡುತ್ತಾರೆ. ಹಿಂದಿನ ಕಾಲದಲ್ಲಿ ಆಯುರ್ವೇದಾಚಾರ್ಯರೂ ಉಗುರು, ಕೈ, ನಾಲಿಗೆ ನೋಡಿ ರೋಗದ ಬಗ್ಗೆ ಹೇಳುತ್ತಿದ್ದರು. ಉಗುರುಗಳಿಂದ ವ್ಯಕ್ತಿಯ ಆರೋಗ್ಯವನ್ನುಕಂಡು ಹಿಡಿಯಬಹುದು ಎಂಬುದು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: