ಜೇನುತುಪ್ಪ ಸಾವಿರಾರು ವರ್ಷಗಳಿಂದ ಭಾರತೀಯ ಆಹಾರ ಪದ್ದತಿಯ ಒಂದು ಭಾಗವಾಗಿದೆ. ಜೇನುತುಪ್ಪದ ರುಚಿ ಎಂದರೆ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಜೇನುತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಹಾಗಂತ ಕಲಬೆರಕೆ ಜೇನು ಸೇವಿಸಿದರೆ ಪ್ರಯೋಜನವಿಲ್ಲ. ಹಾಗಿದ್ದರೆ ಅಸಲಿ ಜೇನು ತುಪ್ಪವನ್ನು ಗುರುತಿಸುವುದು ಹೇಗೆಂದರೆ, ಮೊದಲನೆಯದು ಈ ವಿಧಾನವನ್ನು ಬಹಳ ಹಿಂದಿನಿಂದಲೂ ಜನರು ಶುದ್ಧ ಜೇನುತುಪ್ಪವನ್ನು ಕಂಡು ಹಿಡಿಯಲು ಬಳಸುತ್ತಿದ್ದಾರೆ. ಒಂದು ಗಾಜಿನ ಲೋಟದಲ್ಲಿ ಬಿಸಿನೀರನ್ನುತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಜೇನುತುಪ್ಪವು ನೀರಿನಲ್ಲಿ ತಕ್ಷಣ ಕರಗಿದರೆ, ಅದು ಕಲಬೆರಕೆ ಎಂದರ್ಥ. ಜೇನು ದಪ್ಪವಾದ ಎಳೆ ಎಳೆಯಾ್ಗಿ ಕೆಳಭಾಗದಲ್ಲಿ ಸೇರಿಕೊಂಡರೆ ಅದು ಶುದ್ಧ ಜೇನುತುಪ್ಪ. ಎರಡನೆಯದು ಮೇಣದಬತ್ತಿಯನ್ನು ಹಚ್ಚಿ ಒಂದು ಮರದ ಕಡ್ಡಿಗೆ ಹತ್ತಿಯನ್ನು ಸುತ್ತಿ ಅದರ ಮೇಲೆ ಜೇನುತುಪ್ಪವನ್ನು ಸುರಿಯಿರಿ. ಈಗ ಜೇನು ತುಪ್ಪ ಹಚ್ಚಿದ ಕಡ್ಡಿಯನ್ನು ಬೆಂಕಿಯ ಸಮೀಪ ತನ್ನಿ. ಜೇನುತುಪ್ಪವನ್ನು ಹಚ್ಚಿದ ಕಡ್ಡಿಗೆ ತಕ್ಷಣ ಬೆಂಕಿ ಹೊತ್ತಿಕೊಂಡರೆ ಅದು ಶುದ್ದ ಜೇನು. ಬೆಂಕಿಹೊತ್ತಿಕೊಳ್ಳ ಲು ಸಮಯ ತೆಗೆದುಕೊಂಡರೆ ಅರ್ಥ ಮಾಡಿ ಕೊಳ್ಳಿ ಅದು ಕಲಬೆರಕೆ ಎಂದು.
Next Post
ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ
Tue Mar 29 , 2022
ಸಂಡೇ ಅಂದ್ರೆ ಸಾಕು ಎಲ್ಲರೂ ಮನೆಯಲ್ಲಿ ಏನ್ ಸ್ಪಷೆಲ್ ಅಂತ ಕೇಳ್ತಾರೆ, ಅಷ್ಟರ ಮಟ್ಟಿಗೆ ನಾನ್ವೆಜ್ ಮಾಡುವ ಅಭ್ಯಾಸ ಬೇರೂರಿದೆ. ಆದ್ರೆ ಇದೊಂದು ದೊಡ್ಡ ತಲೆನೋವು ಎನ್ನಬಹುದು. ಪ್ರತಿ ಭಾನುವಾರ ಏನು ಮಾಡೋದು ಅಂತ. ಅದರಲ್ಲೂ ಪ್ರತಿ ಸಲ ಚಿಕನ್, ಮಟನ್ ಸಾರು ಇದನ್ನೇ ಮಾಡಿದ್ರೆ ಬೋರ್ ಆಗುತ್ತೆ, ಏನಪ್ಪ ಮಾಡೋದು ಅಂತ ಇದ್ರೆ ಎಗ್ ಬಿರಿಯಾನಿ ಮಾಡಿ. ಈ ಏಗ್ ಬಿರಿಯಾನಿ ಮಾಡೋದು ಹೇಗೆ, ಎನೆಲ್ಲಾ ಸಾಮಾಗ್ರಿ ಬೇಕು […]

You May Like
-
11 months ago
ದಾಖಲೆ ಸೃಷ್ಟಿಸಿದ ಪುನೀತ್ ಚಿತ್ರ ‘ಜೇಮ್ಸ್’
-
11 months ago
ಕಣ್ಣಿನ ಆರೋಗ್ಯ….
-
10 months ago
‘ಮೊಟ್ಟೆ’ ಸಿಪ್ಪೆಯಿಂದಲೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!
-
11 months ago
ಬಾಲಿವುಡ್ ನಟಿ ಮಾಧುರಿ ಮನೆ ಬಾಡಿಗೆ 12.5 ಲಕ್ಷ ರೂ.