ಪಶ್ಚಿಮ ಬಂಗಾಳದ ಭಿರ್ಭೂಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ಇಂದು ಮುಂಜಾನೆ ಮನೆಗಳಿಗೆ ಬೆಂಕಿ ತಗುಲಿದ ಪರಿಣಾಮ 8 ಮಂದಿ ಸಾವನಪಿರುವ ಘಟಣೆ ಇಂದು ನಡೆದಿದೆ. ಬೆಂಕಿ ತಗುಲಿದ್ದ ಮನೆಯೊಂದರಲ್ಲಿ 8 ಸುಟ್ಟ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಮುಂಜಾನೆ ತೃಣಮೈಲ ಕಾಂಗ್ರೆಸ್ನ ಪಂಚಾಯತ್ತಿ ಮಟ್ಟದ ನಾಯಕನ ಹತ್ಯೆ ನಡೆದ ಬಳಿಕ ಈ ಘಟನೆ ನಡೆದಿದೆ ಎಂದು ಡಿಜಿಪಿ ಮನೋಜ್ ಮಾಳವಿಯಾ ಕೋಲ್ಕತ್ತಾದಲ್ಲಿ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ, ನಿನ್ನೆ ರಾತ್ರಿಯಿಂದ ಗ್ರಾಮದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಿದ್ದೇವೆ. ಮನೆಗಳಿಗೆ ಹೇಗೆ ಬೆಂಕಿ ಹೊತ್ತಿಕೊಂಡಿದೆ ಹಾಗೂ ಈ ಅವಘಡಕ್ಕೂ ಮತ್ತು ಪಂಚಾಯತ್ ಉಪಾಧ್ಯಕ್ಷರ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮಾಳವಿಯಾ ಹೇಳಿದ್ದಾರೆ.