ʼಹೃದಯಾಘಾತʼ ಕ್ಕೂ ಮುನ್ನ ಕಾಣಿಸಿಕೊಳ್ಳುವ ಈ ಲಕ್ಷಣಗಳ ಕುರಿತು ಇರಲಿ ಎಚ್ಚರ..!

 

ಹೃದಯವನ್ನು ಸದೃಢವಾಗಿರಿಸಿಕೊಳ್ಳುವುದು ಬಹಳ ಮುಖ್ಯ.ಯಾಕೆಂದರೆ ಹೃದಯದ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಜೀವನವಿಡೀ ನೀವು ಔಷಧಗಳನ್ನು ಅವಲಂಬಿಸಬೇಕಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ನಿಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ಕೊಡಲು ಪ್ರಯತ್ನಿಸಿ.

ಒತ್ತಡಕ್ಕೆ ಒಳಗಾಗಬೇಡಿ. ಇದಲ್ಲದೆ ಅಧಿಕ ಕೊಲೆಸ್ಟ್ರಾಲ್ ಕೂಡ ಹೃದಯವನ್ನು ಅನರ್ಹಗೊಳಿಸುತ್ತದೆ. ಹೃದಯದ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಕಂಡುಬರುವ ಲಕ್ಷಣಗಳೇನು ಎಂಬುದನ್ನು ಕೂಡ ತಿಳಿದುಕೊಳ್ಳಲೇಬೇಕು. ಇದನ್ನು ನೀವು ನಿರ್ಲಕ್ಷಿಸಬಾರದು.

ಹೃದಯಾಘಾತಕ್ಕೂ ಮುನ್ನ ಕಂಡು ಬರುವ 6 ಲಕ್ಷಣಗಳು…

1. ಹೃದಯ ಅಸ್ವಸ್ಥಗೊಂಡಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಎದೆ ನೋವು ಅಥವಾ ಅಸ್ವಸ್ಥತೆ ಹೃದ್ರೋಗದ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಬಿಗಿತ ಮತ್ತು ಒತ್ತಡದ ಭಾವನೆಯು ಹೃದಯಾಘಾತದ ಲಕ್ಷಣಗಳಾಗಿರಬಹುದು. ಆದರೆ ಎದೆ ನೋವು ಇಲ್ಲದೆ ಕೂಡ ಹೃದಯಾಘಾತ ಸಂಭವಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

2. ಇದರ ಹೊರತಾಗಿ ಆಯಾಸ, ಅಜೀರ್ಣ ಮತ್ತು ಹೊಟ್ಟೆ ನೋವು ಕೂಡ ಹೃದಯಾಘಾತಕ್ಕೂ ಮುನ್ನ ಕಂಡು ಬರುವ ಲಕ್ಷಣಗಳು. ನೀವು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮಲ್ಲಿ ದಣಿವು ಹೆಚ್ಚಾಗುತ್ತದೆ. ಹೊಟ್ಟೆ ನೋವು ಕೂಡ ಬರಬಹುದು.

3. ದೇಹದ ಎಡಭಾಗದಲ್ಲಿ ನೋವಿದ್ದರೆ ಅದು ಕೂಡ ಕೆಲವೊಮ್ಮೆ ಹೃದಯದ ಸಮಸ್ಯೆಯ ಸಂಕೇತವೇ ಆಗಿರುತ್ತದೆ. ಈ ಸ್ಥಿತಿಯಲ್ಲಿ, ನೋವು ಎದೆಯಿಂದ ಪ್ರಾರಂಭವಾಗುತ್ತದೆ ಮತ್ತು ಕೆಳಭಾಗದಲ್ಲಿ ಹೆಚ್ಚಾಗುತ್ತದೆ.

4. ತಲೆತಿರುಗುವಿಕೆಯೂ ಹೃದಯ ವೈಫಲ್ಯದ ಸಂಕೇತಗಳಲ್ಲೊಂದು. ಡಿಹೈಡ್ರೇಶನ್‌ ನಿಂದಲೂ ಕೆಲವೊಮ್ಮೆ ತಲೆತಿರುಗಿದಂತಾಗುತ್ತದೆ. ಆದ್ರೆ ಇದು ಕೂಡ ಹೃದಯದ ಅನಾರೋಗ್ಯದ ಲಕ್ಷಣವೇ ಆಗಿದೆ.

5. ಗಂಟಲು ಅಥವಾ ದವಡೆಯಲ್ಲಿ ನೋವು ಕೂಡ ಹೃದಯಾಘಾತದ ಸಂಕೇತವಾಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ಗಂಟಲು ಅಥವಾ ದವಡೆಯ ನೋವು ಹೃದಯಕ್ಕೆ ಸಂಬಂಧಿಸಿರುವುದಿಲ್ಲ. ಇದು ಶೀತ ಅಥವಾ ಸೈನಸ್‌ನಿಂದ ಉಂಟಾಗುತ್ತದೆ, ಆದರೆ ಕೆಲವೊಮ್ಮೆ ಎದೆ ನೋವು ಅಥವಾ ಒತ್ತಡದಿಂದಾಗಿ, ನೋವು ಗಂಟಲು ಅಥವಾ ದವಡೆಗೆ ಹರಡುತ್ತದೆ.

6. ಸ್ವಲ್ಪ ನಡೆದರೆ, ಅಲ್ಪ ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು ವೀಕ್ನೆಸ್‌ ನಿಂದ ಎಂದು ತಪ್ಪಾಗಿ ಭಾವಿಸಬೇಡಿ. ಅತಿಯಾದ ದಣಿವು ಕೂಡ ಹೃದಯಾಘಾತದ ಮುನ್ಸೂಚನೆಯಾಗಿರಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಕಣ್ಣಿನ ಆಯಾಸ ನಿವಾರಿಸಲು ಮೂರು ಸರಳ ವ್ಯಾಯಾಮಗಳು: ಹೀಗೆ ಮಾಡಿದ್ರೆ ದೃಷ್ಟಿ ಸಮಸ್ಯೆ ಬರಲ್ವಂತೆ!

Mon Apr 4 , 2022
ನಮ್ಮ ಕಣ್ಣಿನ ಆರೋಗ್ಯವು (Eye Care) ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕನ್ನಡಿಯಾಗಿದೆ. ನಾವು ದೈನಂದಿನ ಚುಟವಟಿಕೆ (Routine Life) ನಡೆಸಲು ಹಾಗೂ ಎಲ್ಲಾ ರೀತಿಯ ಕೆಲಸ ಕಾರ್ಯಗಳಿಗೆ ಕಣ್ಣು (Eyes) ಅಗತ್ಯವಾಗಿ ಬೇಕೇ ಬೇಕು ಮತ್ತು ಕಡಿಮೆ ದೃಷ್ಟಿಯೊಂದಿಗೆ ಬದುಕುವುದು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ಸಮಸ್ಯೆಗಳು (Eyes Problem) ಸಾಕಷ್ಟು ಸಾಮಾನ್ಯವಾಗಿದೆ ಮತ್ತು WHO ಪ್ರಕಾರ, ಸಾಕಷ್ಟು ದೀರ್ಘಕಾಲ ಬದುಕುವವರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: