5 ಸಾವಿರ ಹಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಪತ್ನಿ
ಉಮಾ ಅಂತ್ಯಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸಿದ್ದಾರೆ. ಆಗ ಆಕೆಯ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಬ್ರಿಜೇಶ್ ಕೂಡ ಉರಿಯುತ್ತಿರುವ ಬೆಂಕಿಗೆ ಹಾರಿದ್ದಾನೆ.
ಇನ್ನು ಪತಿ ಬ್ರಿಜೇಶ್ ಹಾಗೂ ಪತ್ನಿ ಉಮಾ ನಡುವೆ ಮೊನ್ನೆ ರಾತ್ರಿ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಆಕೆ 5 ಸಾವಿರ ಹಣ ಕೊಡುವಂತೆ ಪತಿಗೆ ಕೇಳಿದ್ದಾಳೆ. ಅದಕ್ಕೆ ಪತ್ನಿಗೆ ಹಣ ಕೊಡಲು ಬ್ರಿಜೇಶ್ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಉಮಾ ಆತ್ಮಹತ್ಯೆಗೆ ಶರಣಾಗಿದ್ದಳು. ರಾತ್ರಿಯೇ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಚಿಕಿತ್ಸೆ ಫಲಿಸದೇ ಮೃತಪಟ್ಟ ಬ್ರಿಜೇಶ್
ಉಮಾ ಅಂತ್ಯಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸಿದ್ದಾರೆ. ಆಗ ಆಕೆಯ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಬ್ರಿಜೇಶ್ ಕೂಡ ಉರಿಯುತ್ತಿರುವ ಬೆಂಕಿಗೆ ಹಾರಿದ್ದಾನೆ. ಕೂಡಲೇ ಕುಟುಂಬಸ್ಥರು, ಸ್ಥಳೀಯರು ಆತನನ್ನು ರಕ್ಷಿಸುವ ಹೊತ್ತಿಗೆ ಅತನ ದೇಹದ ಕೆಲವು ಭಾಗಗಳು ಸುಟ್ಟಿದ್ದವಂತೆ. ನಂತರ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಪತ್ನಿ ಆತ್ಮಹತ್ಯೆ ಬಳಿಕ ಪತಿಗೆ ಖಿನ್ನತೆ
ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಶಾಕ್ಗೆ ಒಳಗಾದ ಪತಿ ಬ್ರಿಜೇಶ್ ಖಿನ್ನತೆಗೆ ಒಳಗಾಗಿದ್ದಾನೆ. ಆಕೆಯ ನಿಧನದ ನಂತರ ತನಗೆ ಬದುಕಲು ಇಷ್ಟವಿಲ್ಲ ಎಂದು ಬ್ರಿಜೇಶ್ ಈ ರೀತಿ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.