ಭಾರತೀಯ ಆಡಳಿತಾತ್ಮಕ ಸೇವೆ (ಐ ಎ ಎಸ್)ಗೆ ಇನ್ನೂ 1,515 ಅಧಿಕಾರಿಗಳ ಅಗತ್ಯವಿದೆ ಎಂಬುದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಸಂಸತ್ತಿಗೆ ನೀಡಿರುವ ಮಾಹಿತಿಯಾಗಿದ್ದು,ಐ ಎ ಎಸ್ ಹಂತದ ಖಾಲಿ ಹುದ್ದೆಗಳಲ್ಲಿ ಕೆಲವನ್ನು ರಾಜ್ಯಗಳ ಸೇವಾ ವ್ಯವಸ್ಥೆಯಿಂದಲೂ ತುಂಬಲಾಗುತ್ತದೆ.ಆದರೆ, ರಾಜ್ಯ ಸರ್ಕಾರಗಳು ಕೇಂದ್ರ ಸೇವೆಗೆ ಡೆಪ್ಯುಟೇಶನ್ ಮೇಲೆ ತೆರಳುವ ಸ್ಥಾನಗಳನ್ನು ಇತ್ತೀಚೆಗೆ ಸೂಕ್ತಮಟ್ಟದಲ್ಲಿ ಪ್ರೋತ್ಸಾಹಿಸುತ್ತಿಲ್ಲ ಎಂಬುದೂ ಸಚಿವರ ಮಾತು.
ದೇಶಾದ್ಯಂತ 6,746 ಐ ಎ ಎಸ್ ಅಧಿಕಾರಿ ಹುದ್ದೆಗಳು ಪ್ರಸ್ತುತ ಇವೆ. ಈ ಕಾರಣ ತಮಿಳುನಾಡು ಹೆಚ್ಚಿನ ಐ ಎ ಎಸ್ ಬಲವನ್ನು ಹೊಂದಿದ್ದರೆ ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಹರ್ಯಾಣ ಮತ್ತು ಮಧ್ಯಪ್ರದೇಶಗಳಿವೆ.ಜಮ್ಮು-ಕಾಶ್ಮೀರದಲ್ಲಿ 137 ಐ ಎ ಎಸ್ ಅಧಿಕಾರಿಗಳಿರಬೇಕಿದ್ದ ಜಾಗದಲ್ಲಿ 59 ಇದ್ದಾರೆ ಎಂದು ಸಚಿವರು ಕೊರತೆಯ ಚಿತ್ರಣ ಕೊಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada