ಇಳಯರಾಜ ’ಗೆ’ ಪ್ರೀತ್ಸು.

 

ಇಳಯರಾಜ ’ಗೆ’ ಪ್ರೀತ್ಸು..

ಸಂಗೀತ ಕ್ಷೇತ್ರದ ಮೇರು ಪ್ರತಿಭೆ  MAESTRO ಇಳಯರಾಜ ಅವರು ಸಂಗೀತ ನೀಡಿರುವ ಹಾಗೂ ಕೆ.ಗಣೇಶನ್ ನಿರ್ದೇಶಿಸಿರುವ

“ಪ್ರೀತ್ಸು” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಭಾ.ಮ.ಹರೀಶ್,  ಟೇ.ಶಿ.ವೆಂಕಟೇಶ್ ಹಾಗೂ ರವಿ ವಿಠಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

 

ಕಳೆದ ಮೂವತ್ತು ದಶಕಗಳಿಂದ ಕನ್ನಡ ಚಿತ್ರರಂಗಲ್ಲಿದ್ದೀನಿ. ನವಭಾರತ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ವಿಭಿನ್ನ ಕಥೆಯುಳ್ಳ “ಪ್ರೀತ್ಸು” ಚಿತ್ರವನ್ನು ನಿರ್ದೇಶನ ಮಾಡಿದ್ದೀನಿ. ನನಗೆ ನಿರ್ಮಾಣದಲ್ಲಿ ಮಲೇಷಿಯಾದ ಗಾನ ವಿನೋದನ್ ಸಾಥ್ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ನಿಜಕ್ಕೂ ಸಂತಸ ತಂದಿದೆ. ನನಗೆ ಇಳಯರಾಜ ಅವರು ಬಹುದಿನಗಳ ಪರಿಚಯ. ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಕೊನೆಯಲ್ಲಿ  ಅವರು ಬರುವುದು ರದ್ದಾಯಿತು. ವಿಡಿಯೋ ಮೂಲಕ ಅವರು ಸಂದೇಶ ಕಳುಹಿಸಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಹರಸಿ ಎಂದರು ನಿರ್ದೇಶಕ ಕೆ.ಗಣೇಶನ್.

 

ಮಲೇಷಿಯಾ ಗೆ ಬಂದಾಗ  ಗಣೇಶನ್ ಈ ಕಥೆ ಹೇಳಿದ್ದರು. ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆವು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗಾನ ವಿನೋದನ್.

 

ನಾಯಕ ಸುಭಾಷ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡು,  ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು.

 

ಮುಖ್ಯ ಅತಿಥಿಗಳು ಚತ್ರಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

 

ಸುಭಾಷ್ ಅವರಿಗೆ ನಾಯಕಿಯಾಗಿ ನೇಹ ಅಭಿನಯಿಸಿದ್ದಾರೆ. ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

 

ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ  ಹಾಗೂ ಜಾನ್ ಪೀಟರ್ ಅವರ ಕಲಾ ನಿರ್ದೇಶನ “ಪ್ರೀತ್ಸು” ಚಿತ್ರಕ್ಕಿದೆ.

Leave a Reply

Your email address will not be published. Required fields are marked *

Next Post

ಬೆಲ್ ಬಾಟಮ್ ಆಯಿತ್ತು ಇಗಾ "ಬೆಲ್ ಬಟನ್"

Thu Apr 7 , 2022
  ಬೆಲ್ ಬಾಟಮ್ ಆಯಿತ್ತು ಇಗಾ “ಬೆಲ್ ಬಟನ್“    ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರಲ್ಲಿ  ಸುನೀಲ್ ಕುಮಾರ್ ದೇಸಾಯಿ ಸಹ ಒಬ್ಬರು.   ಅಂತಹ ಉತ್ತಮ ನಿರ್ದೇಶಕರಿಂದ ಇತ್ತೀಚೆಗೆ “ಬೆಲ್ ಬಟನ್” ಚಿತ್ರದ ಪೋಸ್ಟರ್ ಅನಾವರಣವಾಗಿದೆ.   ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವವಿರುವ  ಲ‌ಕ್ಷ್ಮಿನರಸಿಂಹ. ಎಂ “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಕೌಟುಂಬಿಕ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: