ಜಾತಿ ಭೇಧ, ಧರ್ಮ ಭೇದ ಇಂತಹ ಗಡಿಗಳೆಲ್ಲ ದೊಡ್ಡವರಿಗೆ ಮಾತ್ರ ಇರುತ್ತದೆ. ಆದರೆ ಚಿಕ್ಕಮಕ್ಕಳಿಗೆ ಯಾವ ಭೇದವೂ ಇಲ್ಲ, ಯಾವ ಗಡಿಯೂ ಇಲ್ಲ. ಚಿಕ್ಕ ಮಕ್ಕಳ ನಿರ್ಮಲ ಮನಸ್ಸಿನಲ್ಲಿ ಎಲ್ಲರೂ ಒಂದೇ. ನಮ್ಮವರು, ಮನೆಯವರು, ಪಕ್ಕದ ಮನೆಯವರು, ಅಪರಿಚಿತರು ಎಂಬ ಭೇದ ಭಾವವಿಲ್ಲ. ಮನಸ್ಸಿನ ಗಡಿಯನ್ನೂ ದಾಟುವ ಪುಟ್ಟ ಮಕ್ಕಳು ಒಮ್ಮೊಮ್ಮೆ ದೇಶದ ಗಡಿಯನ್ನೂ ದಾಟುವುದಿದೆ. ಇಲ್ಲಿ ಆಗಿದ್ದು ಅದೇ ನಾಲ್ಕು ವರ್ಷದ ಮಗು ಗಡಿ ದಾಟಿ ಭಾರತದ ಗಡಿಯೊಳಕ್ಕೆ ಬಂದು ಬಿಟ್ಟಿದೆ. ಮಗು ಗಡಿ ದಾಟಿ ಬಂದಿದ್ದನ್ನು ಭಾರಿತೀಯ ಸೇನೆಯ ಅಧಿಕಾರಿಗಳು ನೋಡಿದ್ದಾರೆ. ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಕೂಡಲೇ ಆ ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆ ಮಗು ಭಯಪಡಬಹುದು ಎಂಬ ಕಾರಣಕ್ಕೆ ಮುದ್ದು ಮಾಡುತ್ತಲೇ ಮಾತನಾಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada