ಮಾ.24-ಸಮುದ್ರದ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡಿನ 16 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಎರಡು ಯಾಂತ್ರಿಕೃತ ದೋಣಿಗಳನ್ನು ಸಹ ಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ.
ಎರಡು ಯಾಂತ್ರಿಕೃತ ದೋಣಿಗಳನ್ನು ಸಹ ಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ. 12 ಮಂದಿ ಮೀನುಗಾರರು ಕಚ್ಚತೀವು ಬಳಿ ಮತ್ತು ಉಳಿದವರು ಮನ್ನಾರ್ ಕೊಲ್ಲಿ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಅವರ ಬಿಡುಗಡೆಗೆ ಕ್ರಮ ಕೃಗೊಳ್ಳಲಾಗುವುದು,ಲಂಕಾ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಮಾತುಕತೆ ನಡೆದಿದೆ.
ಕಳೆದ ತಿಂಗಳು ತಮಿಳುನಾಡು ರಾಜ್ಯದ ಹಲವಾರು ಮೀನುಗಾರರನ್ನು ಲಂಕಾ ಅನೇಕ ಸಂದರ್ಭಗಳಲ್ಲಿ ಬಂಧಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ಕಪಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada.