ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (GT vs LSG) ನಡುವಿನ ಪಂದ್ಯದ ವೇಳೆ ಕೃನಾಲ್ ಮೊದಲ ಎಸೆತದಲ್ಲಿ ಅವರ ಸಹೋದರ ಹಾರ್ದಿಕ್ ಅವರ ವಿಕೆಟ್ ಪಡೆದರು. ಗುಜರಾತ್ ಟೈಟಾನ್ಸ್ಗೆ ನಾಯಕ ಹಾರ್ದಿಕ್ ಪಾಂಡ್ಯ ಕಡಿಮೆ ಮೊತ್ತಕ್ಕೆ ಪತನವಾಗುತ್ತಿದ್ದ ತಮ್ಮ ತಂಡಕ್ಕೆ ಆಧಾರವಾಗುತ್ತಿದ್ದರು. ಆ ವೇಳೆ 15 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು ಗುಜರಾತ್ ಟೈಟಾನ್ಸ್. ಆದರೆ ಈ ವೇಳೆ ಬೌಲಿಂಗ್ ಆರಂಭಿಸಿದ ಕೃನಾಲ್ ಪಾಂಡ್ಯ ತಮ್ಮ ಸಹೋದರ ಹಾರ್ದಿಕ್ರನ್ನು ಒಂದೇ ಎಸೆತದಲ್ಲಿ ಪೆವಿಲಿಯನ್ಗೆ ಕಳಿಸಿಬಿಟ್ಟರು.
ಆದರೆ ತಮ್ಮ ಸಹೋದರನನ್ನು ಔಟ್ ಮಾಡಿದ ನಂತರ ಕೃನಾಲ್ ಪಾಂಡ್ಯ ಅಷ್ಟೊಂದು ಖುಷಿಗೊಳ್ಳಲಿಲ್ಲ. ತಮ್ಮ ಎರಡು ಕೈಗಳ ಹಸ್ತದಿಂದ ಮುಖ ಮುಚ್ಚಿಕೊಂಡಿದ್ದರು ಅವರು. ಆನಂತರ ಸ್ವಲ್ಪ ನಗುಮುಖದಲ್ಲಿ ಕಾಣಿಸಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada