ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ರಿಯಲ್ ಲೈಫ್ ಘಟನೆಗಳು ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಅದರಲ್ಲೂ ಪರಿಮಳಾ (Parimala Jaggesh) ಜೊತೆಗಿನ ಅವರ ಲವ್ಸ್ಟೋರಿ ಸಖತ್ ಸಿನಿಮೀಯವಾಗಿದೆ. ಅದು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಈ ವಿಚಾರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈಗ ಜಗ್ಗೇಶ್ ಮತ್ತು ಪರಿಮಳಾ ದಾಂಪತ್ಯ (Jaggesh-Parimala Wedding Anniversery) ಜೀವನಕ್ಕೆ 38ರ ವಸಂತ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ನಟ ಜಗ್ಗೇಶ್-ಪರಿಮಳಾ
ಜಗ್ಗೇಶ್ ಮತ್ತು ಪರಿಮಳಾ ಅವರದ್ದು ಲವ್ ಮ್ಯಾರೇಜ್. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್ ಅವರಿಗೆ 19ರ ಪ್ರಾಯ.ನಟ ಜಗ್ಗೇಶ್ (Jaggesh) ಫ್ಯಾಮಿಲಿ ಮ್ಯಾನ್.