‘ಜೇಮ್ಸ್’ ಸಿನಿಮಾ ಮಾರ್ಚ್ 17ರಂದು ತೆರೆಕಂಡ ದಿನದಿಂದ ವರ್ಲ್ಡ್ ವೈಡ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯ, ಹೊರ ರಾಜ್ಯ ಮತ್ತೆ ಬೇರೆ ಬೇರೆ ದೇಶಗಳಲ್ಲಿ ಪುನೀತ್ ಅಭಿನಯದ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದ್ದು ಕಲೆಕ್ಷನ್ ವಿಚಾರದಲ್ಲಿ ಭಾರೀ ಸದ್ದು ಮಾಡಿದೆ.
‘ಜೇಮ್ಸ್’ ಸಿನಿಮಾದ ಡೇ ಒನ್ ಕಲೆಕ್ಷನ್ ನಿಂದ ಹಿಡಿದು ಇಲ್ಲಿಯವರೆಗೂ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಕಣ್ಣಿಟ್ಟಿರುವ ಸಿನಿಮಾ ಮಂದಿ ಭಾರಿ ಕೌತುಕದಿಂದ ‘ಜೇಮ್ಸ್’ ಕಲೆಕ್ಷನ್ ಬಗ್ಗೆ ಮಾತನಾಡುತ್ತಿದ್ದಾರೆ.
‘ಜೇಮ್ಸ್’ ಸಿನಿಮಾದ ಡೇ 1 ನಿಂದ ಡೇ 5 ವರೆಗಿನ ಕರ್ನಾಟಕದ ಲೆಕ್ಕಾಚಾರ ಈ ಕೆಳಕಂಡಂತೆ ಇದೆ. ಮೊದಲ ನಾಲ್ಕು ದಿನ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಸಿಕ್ಕಾಪಟ್ಟೆ ಕಲೆಕ್ಷನ್ ಕಂಡಿದೆ.
ಮೊದಲ ದಿನ: Rs 20.3 ಕೋಟಿ ( ಕರ್ನಾಟಕ)
2ನೇ ದಿನ : Rs 8.89 ಕೋಟಿ ( ಕರ್ನಾಟಕ)
3ನೇ ದಿನ : Rs 9.09 ಕೋಟಿ ( ಕರ್ನಾಟಕ)
4ನೇ ದಿನ : Rs 10.98 ಕೋಟಿ (ಕರ್ನಾಟಕ)
5ನೇ ದಿನ : Rs 5 ಕೋಟಿ (ಕರ್ನಾಟಕ)
ಒಟ್ಟು ಕಲೆಕ್ಷನ್: Rs 54.26 ಕೋಟಿ (ಕರ್ನಾಟಕ)
5ನೇ ದಿನದ ಲೆಕ್ಕಾಚಾರ ಏನಾಯ್ತು ?
‘ಜೇಮ್ಸ್’ ರಿಲೀಸ್ ಆಗಿ ನಾಲ್ಕನೇ ದಿನದವರೆಗೂ ಕಲೆಕ್ಷನ್ನಲ್ಲಿ ತುಂಬ ಉತ್ತಮವಾಗಿತ್ತು. ಕಲೆಕ್ಷನ್ ವಿಚಾರದಲ್ಲಿ ‘ಜೇಮ್ಸ್’ ಮ್ಯಾಜಿಕ್ ಮಾಡಿತ್ತು. ವಾರಾಂತ್ಯ ಕಳೆದ ನಂತರವೂ ತನ್ನ ಚಾರ್ಮ್ ಕಳೆದುಕೊಳ್ಳದ ಜೇಮ್ಸ್ ಈಗಲೂ ವೀಕ್ಷಕರಿಂದ ಉತ್ತಮ ಪ್ರಶಂಸೆ ಜೊತೆಗೆ ಥಿಯೇಟರ್ ಕೂಡ ಹೌಸ್ ಫುಲ್ ಆಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾಗಿರೋದು ‘ಜೇಮ್ಸ್’ 5ನೇ ಸಿನಿಮಾದ ಕಲೆಕ್ಷನ್. ಎಸ್.. ಜೇಮ್ಸ್ ಚಿತ್ರದ ಗಳಿಕೆ ಐದನೇ ದಿನಕ್ಕೆ ಕೊಂಚ ಕಮ್ಮಿ ಆಗಿದೆ. ಸೋಮವಾರ (ಮಾರ್ಚ್21) ಕೇವಲ 5 ಕೋಟಿ ಕಲೆಕ್ಷನ್ ಮಾಡಿದೆ. ಈ ಲೆಕ್ಕಾಚಾರ ನೋಡುಗರ ತಲೆಕೆಡಿಸುವಂತೆ ಮಾಡಿದೆ. ವಾರದ ಆರಂಭದಲ್ಲಿ ಇದು ಉತ್ತಮ ಕಲೆಕ್ಷನ್ ಎನ್ನಬಹುದು. ಈ ಮೂಲಕ ಕರ್ನಾಟಕದಲ್ಲಿ ‘ಜೇಮ್ಸ್’ ಚಿತ್ರದ ಒಟ್ಟು ಕಲೆಕ್ಷನ್ 54.26 ಕೋಟಿ.