ನಟ ಪುನೀತ್ ರಾಜ್ ಕುಮಾರ್ ( Actor Puneet Rajkumar ) ಅಭಿನಯದ ಕೊನೆಯ ಜೇಮ್ಸ್ ಚಿತ್ರವನ್ನು ( James Movie ) ಸಿನಿಮಾ ಮಂದಿರಗಳಿಂದ ತೆರವುಗೊಳಿಸಿ, ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಪ್ರದರ್ಶನಕ್ಕೆ ಬಿಜೆಪಿ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ.
ಈ ವಿಚಾರವನ್ನು ಸ್ವತಹ ನಿರ್ಮಾಪಕರೇ ತಮ್ಮ ಬಳಿಯಲ್ಲಿ ಹೇಳಿಕೊಂಡಿರೋದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಆದ್ರೇ.. ಜೇಮ್ಸ್ ಚಿತ್ರಕ್ಕೆ ಯಾರೂ ವಿರೋಧ ಮಾಡುತ್ತಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.ಈ ಬಗ್ಗೆ ವಿಧಾನಸೌಧದಲ್ಲಿ ಗೃಹ ಸಚಿಚ ಆರಗ ಜ್ಞಾನೇಂದ್ರ ಮಾತನಾಡಿ, ಜೇಮ್ಸ್ ಚಿತ್ರವೇ ಬೇರೆ ಕಾಶ್ಮೀರ ಫೈಲ್ಸ್ ಚಿತ್ರವೇ ಬೇರೆ ಆಗಿದೆ. ಜೇಮ್ಸ್ ಚಿತ್ರಕ್ಕೆ ಯಾರೂ ವಿರೋಧಮಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಜನರ ಮನಸ್ಸನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.