ಈ ಚಿತ್ರಕ್ಕಾಗಿ ‘ಬಚ್ಚನ್ ಪಾಂಡೆ’ ಸ್ಥಗಿತ, ‘ಜೇಮ್ಸ್’ಗೂ ಕಂಟಕ!

 

ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’, ಕನ್ನಡದ ‘ಜೇಮ್ಸ್’, ತೆಲುಗಿನ ‘RRR’ ಚಿತ್ರಗಳು ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿವೆ. ಈ ಮೂರು ಸಿನಿಮಾಗಳ ನಡುವೆ ಚಿತ್ರಮಂದಿರಗಳಿಗೆ ಪೈಪೋಟಿ ಶುರುವಾಗಿದೆ. ಎಲ್ಲಿ ಏನೇ ಪೈಪೋಟಿ ನಡೆದರು ಓಕೆ.

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಸರ್ಕಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪರವಾಗಿ ನಿಂತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ತಕ್ಕಂತೆ ಈ ಚಿತ್ರವನ್ನು ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ. ಈ ಚಿತ್ರದಿಂದ ಕನ್ನಡದ ‘ಜೇಮ್ಸ್‌’ಗೂ ತೊಂದರೆ ಆಗುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನ ಮಾಡುವ ಸಲುವಾಗಿ ‘ಜೇಮ್ಸ್’ ಚಿತ್ರವನ್ನು ಎತ್ತಂಗಡಿ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಕರ್ನಾಟಕದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಗೆ ಭಾರಿ ವಿರೋಧ!ಆದರೆ ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಮೋಸ ಯಾಕೆ ಎಂದು ಕನ್ನಡಿಗರು ಕಿಡಿಕಾರುತ್ತಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಹಾವಾಳಿ ಎಲ್ಲೆಡೆ ಜೋರಾಗಿದೆ. ದೇಶ ಪ್ರೇಮದ ಹೆಸರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರಕ್ಕಾಗಿ ಹಲವು ಚಿತ್ರಗಳನ್ನು ಬಲವಂತವಾಗಿ ಬಲಿಕೊಡಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕನ್ನಡದ ‘ಜೇಮ್ಸ್’. ಪರಭಾಷೆ ಚಿತ್ರ ಬಿಡಿ ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಿತ್ರಗಳ ಮೇಲೂ ದಬ್ಬಾಳಿಕೆ ನಡೆಸಿರೋದಾಗಿ ವರದಿ ಆಗಿದೆ.

ನಟ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರಕ್ಕೆ ಈಗ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ಕಂಟಕ ಎದುರಾಗಿದೆ. ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದರು. ಆದರೂ ಅದು ಹೇಗೆ ಅಕ್ಷಯ್ ಚಿತ್ರಕ್ಕೆ ಕಂಟಕ ಎದುರಾಯ್ತು ಎನ್ನುವ ಪ್ರಶ್ನೆ ಮೂಡಬಹುದು.

ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರವನ್ನು ಬಲವಂತವಾಗಿ ಚಿತ್ರಮಂದಿರದಿಂದ ತೆಗೆದು ಹಾಕಲು ಒತ್ತಾಯಿಸಲಾಗಿದೆ. ಒಡಿಶಾದ ಚಿತ್ರಮಂದಿರ ಒಂದರಲ್ಲಿ ‘ಬಚ್ಚನ್ ಪಾಂಡೆ’ ಚಿತ್ರ ಪ್ರದರ್ಶನದ ವೇಳೆ ಕೇಸರಿ ಶಾಲು ಹೊದ್ದು ಬಂದ ತಂಡ ಒಂದು, ಬಚ್ಚನ್ ಪಾಂಡೆ ಸಿನಿಮಾ ತೆಗೆದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರರ್ದಶಿಸಲು ಒತ್ತಾಯ ಮಾಡಿದೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.’ಜೇಮ್ಸ್‌’ಗೂ ಕಂಟಕವಾದ ‘ದಿ ಕಾಶ್ಮೀರ್ ಫೈಲ್ಸ್’!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಪೆಟ್ರೋಲ್ ದರ ಹೆಚ್ಚಳಿಕೆ

Thu Mar 24 , 2022
    ಸತತ ಎರಡನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ ಸುಮಾರು 80 ಪೈಸೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ರೂ102.24ಕ್ಕೆ, ಡೀಸೆಲ್ ಬೆಲೆಯು ರೂ86.57ಕ್ಕೆ ತಲುಪಿದೆ. ಭಾರತದ ಮೂರ ಸರಕಾರಿ ತೈಲ ಕಂಪನಿಗಳು ಬುಧವಾರ ಹೂಸ ದರ ಬಿಡುಗಡೆ ಮಾಡಿವೆ. ದೇಶದಲ್ಲಿ ಕಳೆದ ನವೆಂಬರ್ 4ರಿಂದ ಇಂದನ ದರ ಪರಿಷ್ಕರಿಸಿರಲಿಲ್ಲ.

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: