ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ಯೂಟ್ಯೂಬರ್ , ಯಾಸಿರ್ ಸೋಹಾರ್ವಾರ್ದಿ ಎಂಬವರು, ಜನಪ್ರಿಯ ಕಚ್ಚಾ ಬಾದಾಮ್ ಟ್ಯೂನನ್ನು ಆಧರಿಸಿದ ಮ್ಯೂಸಿಕ್ ಒಂದನ್ನು ರಚಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪಾಯೆ ಥೋಡಾ ಹಾತೆರ್ ಬಾಲಾ ಥಾಕೆ ಯೋದಿ ಸೀಟಿ ಗೋಲ್ಡೆರ್ ಚೇನ್ ದೀಯೇ ಜಾಬೆನ್.. ಬಾದಾಮ್ ಬಾದಾಮ್ ದಾದ ಕಚ್ಚಾ ಬಾದಾಮ್.ಎಲ್ಲರ ಬಾಯಲ್ಲೂ ಈಗ ಇದೇ ಹಾಡು. ಕಚ್ಚಾ ಬಾದಾಮ್ ಎಂಬ ಈ ಬಂಗಾಲಿ ಹಾಡು ವೈರಲ್ ಆಗಿ ಬಹಳಷ್ಟು ದಿನಗಳಾದರೂ, ಅದರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ರೀಲ್ಗಳಲ್ಲಿ ಈಗಾಲೂ ಕಚ್ಚಾ ಬಾದಾಮ್ ಹಾಡಿನದ್ದೇ ಹವಾ. ಜನಸಾಮಾನ್ಯರಿಂದ ಹಿಡಿದು ಸಿನಿಮಾ, ಕಿರುತೆರೆ ನಟನಟಿಯರವರೆಗೆ ಎಲ್ಲರೂ ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಕೊರಿಯಾ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಾಡು ಜನಪ್ರಿಯವಾಗಿದೆ. ಅಲ್ಲಿನ ನೆಟ್ಟಿಗರು ಕೂಡ, ಕಚ್ಚಾ ಬಾದಾಮ್ ವೈರಲ್ ಡ್ಯಾನ್ಸ್ ಚಾಲೆಂಜ್ನಲ್ಲಿ ಭಾಗವಹಿಸಿದ್ದಾರೆ.
ಇದೀಗ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ಯೂಟ್ಯೂಬರ್ , ಯಾಸಿರ್ ಸೋಹಾರ್ವಾರ್ದಿ ಎಂಬವರು, ಜನಪ್ರಿಯ ಕಚ್ಚಾ ಬಾದಾಮ್ ಟ್ಯೂನನ್ನು ಆಧರಿಸಿದ ಮ್ಯೂಸಿಕ್ ಒಂದನ್ನು ರಚಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada