ಕಲ್ಲಂಗಡಿ ಬೀಜಗಳ ಪ್ರಯೋಜನಗಳೇನೂ…!

ಬೇಸಿಗೆಯಲ್ಲಿ ಜನ ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿಯು  ಕೂಡಾ ಒಂದು. ಕಲ್ಲಂಗಡಿ ಜ್ಯೂಸ್ ಮಾಡಿ ಕುಡಿದರೆ ದೇಹ ತಣ್ಣಗಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ನೀವು ಕಲ್ಲಂಗಡಿ ಕತ್ತರಿಸಿ ಜ್ಯೂಸ್ ಮಾಡಿದ ಮೇಲೆ ಅದರ ಬೀಜವನ್ನ ಎಸೆಯುತ್ತಿರಾ. ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಹಲವರು ಪ್ರಯೊಜನಗಳಿವೆ. ಬೀಜ ಅಗತ್ಯವಿಲ್ಲ ಎಂದು ಎಸೆಯುವ ಮುನ್ನಾ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ.

 *ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:
ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಸೌಂದರ್ಯ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಕಲ್ಲಂಗಡಿ ಬೀಜಗಳು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತವೆ. ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ.

* ತಲೆ ಕೂದಲಿಗೆ ಒಳ್ಳೆಯದು:
ಪ್ರತಿಯೊಬ್ಬರೂ ಆರೋಗ್ಯಕರ ತಲೆ ಕೂದಲನ್ನು ಇಷ್ಟಪಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಇರುವ ಪ್ರೋಟೀನ್ಗಳು, ಕಬ್ಬಿಣ, ಮೆಗ್ನೀಸಿಯಂ, ಸತು ಮತ್ತು ತಾಮ್ರ ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಕಲ್ಲಂಗಡಿ ಬೀಜದಲ್ಲಿರುವ ಮ್ಯಾಂಗನೀಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ನೀವು ಕಲ್ಲಂಗಡಿ ಬೀಜಗಳನ್ನು ಒಣಗಿಸಿ ಸೇವಿಸಬಹುದು. ಬಾಣಲಿಯಲ್ಲಿ ಹುರಿದು ಕೂಡಾ ತಿನ್ನಬಹುದು. ಹೇಗೆ ತಿಂದರೂ ಇದು ತುಂಬಾ ಟೇಸ್ಟಿಯಾಗಿದೆ.

Leave a Reply

Your email address will not be published. Required fields are marked *

Next Post

'ಹೋಮ್ ಮಿನಿಸ್ಟರ್' ಟ್ರೈಲರ್ ರಿಲೀಸ್.....

Tue Mar 22 , 2022
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತಿದ್ದು, ಟ್ರೈಲರ್ ವೀಕ್ಷಿಸಲು ಉಪ್ಪಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸುಜಯ್ ಕೆ ಶ್ರೀಹರಿ ನಿರ್ದೇಶನದ ಈ ಸಿನಿಮಾವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಕೈಯಿಂದ ಈ ಟ್ರೈಲರ್ ಲಾಂಚ್ ಮಾಡಿಸಲಿದ್ದಾರೆ. ಎಸ್ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ನಿರ್ಮಾಣದ ಈ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: