ಯುಗಾದಿ ಹಬ್ಬದ ಅಂಗವಾಗಿ ಹಲವಾರು ಜನರು ವಿವಿಧ ಜಿಲ್ಲೆಗಳಿಗೆ, ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನಲೆಯಲ್ಲಿ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದಿಂದ ಯುಗಾದಿ ಹಬ್ಬದ ಪ್ರಯುಕ್ತ ಹೊಸಪೇಟೆಯಿಂದ ಶ್ರೀಶೈಲಕ್ಕೆ ಮಾರ್ಚ್ 21ರಿಂದಲೇ ವಿಶೇಷ ಬಸ್ ಸೌಲಭ್ಯವನ್ನು ಆರಂಭಿಸಿದೆ.
ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಬಸ್ ನಿಲ್ದಾಣಗಳಿಂದಲೂ ವಿಶೇಷ ಬಸ್ಗಳು ಸಂಚಾರ ನಡೆಸಲಿವೆ ಎಂದು ಹೊಸಪೇಟೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿಯಿಂದ ಶ್ರೀಶೈಲಕ್ಕೆ ಬಸ್ಗಳು ವಯಾ ಹೊಸಪೇಟೆ, ಬಳ್ಳಾರಿ, ಗುಂತಕಲ್, ಗುತ್ತಿ, ಕರ್ನೂಲ್ ಮಾರ್ಗವಾಗಿ ಚಲಿಸಲಿವೆ. ಈ ಬಸ್ಗಳು ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಿಂದ ಮಾರ್ಚ್ 21ರಿಂದ ಏಪ್ರಿಲ್ 20ರವರೆಗೆ ಬೆಳಗ್ಗೆ 7.30 ಹಾಗೂ ಸಂಜೆ 6.30ಕ್ಕೆ ಹೊರಡಲಿವೆ.
ಮಾರ್ಚ್ 21ರಿಂದ ಹೊಸಪೇಟೆ-ಶಿರಡಿ ರಾಜಹಂಸ ಬಸ್ ವ್ಯವಸ್ಥೆಯನ್ನು ಪುನರ್ ಪ್ರಾರಂಭಿಸಲಾಗಿದ್ದು, ಮೊದಲಿನ ವೇಳಾಪಟ್ಟಿಯಂತೆ ಸಂಜೆ 5ಕ್ಕೆ ಹೊಸಪೇಟೆ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಿದೆ.
ಕಲಬುರಗಿಯಿಂದಲೂ ವಿಶೇಷ ಬಸ್; ಶ್ರೀಶೈಲಂನಲ್ಲಿ ನಡೆಯುವ ರಥೋತ್ಸವಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಕಲಬುರಗಿ ಘಟಕ-1 ಮತ್ತು 4, ಚಿಂಚೋಳಿ, ಚಿತ್ತಾಪೂರ, ಕಾಳಗಿ ಹಾಗೂ ಸೇಡಂ ಘಟಕಗಳಿಂದ ಶ್ರೀಶೈಲಂಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸುನೀಲಕುಮಾರ್ ಚಂದರಗಿ ಈ ಕುರಿತು ಮಾಹಿತಿ ನೀಡಿದ್ದಾರೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ 7760992102, 7760992101, ಕಲಬುರಗಿ ಘಟಕ-1ರ ಘಟಕ ವ್ಯವಸ್ಥಾಪಕ 7760992113, ಕಲಬುರಗಿ ಘಟಕ-4ರ ಘಟಕ ವ್ಯವಸ್ಥಾಪಕ 7022012103, ಚಿಂಚೋಳಿ ಘಟಕದ ವ್ಯವಸ್ಥಾಪಕ 7760992117 ಕರೆ ಮಾಡಬಹುದು.
ಇನ್ನು ಚಿತ್ತಾಪೂರ ಘಟಕದ ಘಟಕ ವ್ಯವಸ್ಥಾಪಕರನ್ನು 7760992119, ಕಾಳಗಿ ಘಟಕದ ಘಟಕ ವ್ಯವಸ್ಥಾಪಕರನ್ನು 7760992120 ಹಾಗೂ ಸೇಡಂ ಘಟಕದ ಘಟಕ ವ್ಯವಸ್ಥಾಪಕರನ್ನು 7760992466 ಸಂಖ್ಯೆಗಳಿಂದ ಸಂಪರ್ಕಿಸಬಹುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada