ಅನುಪೋಮ್ ಖೇರ್ ಅಭಿನಯದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಬಿಡುಗಡೆಯಾದಾಗಿನಿಂದ ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ. ಈ ಚಲನಚಿತ್ರವನ್ನು ನೋಡಲು ಬರುವವರಿಗೆ ಆಟೋ ಚಾಲಕನೊಬ್ಬ ತೋರಿದ ಮಾನವೀಯತೆಗೆ ಅಗ್ನಿಹೋತ್ರಿ ಅವರೇ ಅಭಿಮಾನಿಯಾಗಿದ್ದಾರೆ.
ಆದ್ರೆ ಅಭಿಮಾನಿಯ ಮಾಡಿದ ಕೆಲಸವೇನು ಅಂತಾ ಇಲ್ಲಿ ನೋಡಿ.
भारत।
मानवता।
शत शत नमन।कृतज्ञ।
ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾವನ್ನು ವೀಕ್ಷಿಸಲು ಹೋಗುವವರಿಗೆ ಹಣವನ್ನು ವಿಧಿಸಲು ಆಟೋ ಚಾಲಕ ನಿರಾಕರಿಸಿದ್ದಾನೆ, ಮಹಿಳೆಯೊಬ್ಬರು ತನ್ನ ವಾಹನದಿಂದ ಇಳಿದ ನಂತರ ಆಟೋ ಚಾಲಕನಿಗೆ ಹಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ, ಆಟೋ ಚಾಲಕ ಕೈಮುಗಿದು ʻನನಗೆ ಹಣ ಬೇಡʼ ಎಂದಿದ್ದಾನೆ. ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಆತನಿಗೆ, ‘ಭಯ್ಯಾ, ನಾವು ಕಾಶ್ಮೀರ್ ಫೈಲ್ ಸಿನಿಮಾ ನೋಡಲು ಬಂದಿದ್ದೇವೆ, ದಯವಿಟ್ಟು ಹಣವನ್ನು ತೆಗೆದುಕೊಳ್ಳಿ ಎಂದಿದ್ದಾರೆ. ಆದರೆ ಎಷ್ಟು ಹೇಳಿದರೂ ಮತ್ತೆ ಹಣ ಪಡೆಯಲು ಚಾಲಕ ನಿರಾಕರಿಸಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada