ಕೇಶಕಾಂತಿಯ ಆರೋಗ್ಯ
ಕೂದಲಿನ ಆರೋಗ್ಯ/ ಕೂದಲ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳೋದು ಹಾಗದರೆ ಕುದಲನ್ನು ಹೇಗೆ ಕಾಳಜೀ ವಹಿಸುವುದು ?
ಕರೀಬೇವು , ಮೆಂತ್ಯೆ,ಬಿಳಿ ದಾಸವಾಳ ಮತ್ತು ದಾಸವಾಳದ ಎಲೆ,ದಾಸವಾಳದ ಬಳಕೆ ಯಾಕೆ?
ಕೂದಲಿನ ಆರೋಗ್ಯ/ ಕೂದಲ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳೋದು.
ಇತ್ತಿಚಿನ ದಿನದಲ್ಲಿ ಅತಿ ಸಣ್ಣ ವಯಸ್ಸಿನಲೇ ಬಿಳಿ ಕುದಲು, ತಲೆ ಹೊಟ್ಟು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆಗಳಿಂದ ನೀವು ಬಳಲುತಿದ್ದಿರಾ,
ಇದಕೆಲ್ಲಾ ಕಾರಣ ಅತಿಯಾದ ಒತ್ತಡ, ಬದಲಾಗುತ್ತಿರುವ ವಾತಾವರಣ ಮತ್ತು ಕೂದಲಿಗೆ ಸರಿಯಾದ ಪೋಷಣೆ ಸಿಗದೆ ಇರುವುದು….
ಹಾಗದರೆ ಕುದಲನ್ನು ಹೇಗೆ ಕಾಳಜೀ ವಹಿಸುವುದು..?
ಸಾವಿರಾರು ರೂಪಾಯಿ ಖರ್ಚುಮಾಡಿ ಸೋಪು , ಎಣ್ಣೆ ಇನ್ನು ವಿಧ ವಿಧವಾದ ಉತ್ಪನಗಳನ ಹಾಕಿದರು ಕೂದಲಿನ ಸಮಸ್ಯೆ ಪರಿಹಾರವಾಗಿಲ್ವ?….
ಇದಕ್ಕೆಲ್ಲ ಪರಿಹಾರ ಮನೆಯಲೆ ಸುಲಭವಾಗಿ ಸಿಗುತ್ತದೆ …..
ಕರೀಬೇವು , ಮೆಂತ್ಯೆ,ಬಿಳಿ ದಾಸವಾಳ ಮತ್ತು ದಾಸವಾಳದ ಎಲೆ,ಆಗದರೆ ಹೇಗೆ ಇವುಗಳನ್ನು ಬಳಸೋದು…
ಕರೀಬೇವು, ದಾಸವಾಳದ ಹೂ , ಎಲೆಗಳನ್ನು ಚನ್ನಾಗಿ , ಒಣಗಿಸಬೇಕು, ನಂತರ ಕೊಬ್ಬರಿ ಎಣ್ಣೆಯನ್ನು ಕಾಯಿಸಿ ಅದರೊಳಗೆ ಮೇಂತ್ಯೆ, ಮತ್ತು ಒಣಗಿಸಿದ ಎಲೆಗಳನ್ನು ಹಾಕಿ ಕುದಿಸಬೇಕು ನಂತರ ಹಾರಿಸಿ ಒಂದು ಸಿಸದೊಳಗೆ ಶೇಕರಿಸ ಬಹುದು, ಈ ಎಣ್ಣೆಯನ್ನು ವಾರದಲ್ಲಿ 2 ದಿನ ತಲೆಗೆ ಹಚ್ಚಿದರೆ ಕೂದಲಿನ ಸಮಸ್ಯೆ ಇರುವುದಿಲ್ಲ,
ಕರಿಬೇವಿನ ಬಳಕೆ ಯಾಕೆ ಮಾಡುತಾರೆ, ಬಿಳಿ ಕೂದಲಿನ ಸಮಸ್ಯೆಗೆ ರಾಮ ಬಾಣ,
ದೇಹದದಲ್ಲಿ ಪೋಷಕಾಂಶಗಳ ಕೊರತೆಯಾದರೆ ಸಣ್ಣ ಪ್ರಾಯದಲ್ಲೇ ಕೂದಲು ಬಿಳಿಯಾಗಿಬಿಡುತ್ತದೆ. ಇಂತಹ ಸಮಸ್ಯೆಯನ್ನು ಕರಿಬೇವಿನ ಆಹಾರದಿಂದ ತಡೆಯಬಹುದು. ಹಾಗೆಯೇ ಕೂದಲ ಬೆಳವಣಿಗೆಗೂ ಕರಿಬೇವಿನ ಎಲೆಗಳು ಸಹಕಾರಿಯಾಗಿದೆ, ದಾಸವಾಳದ ಬಳಕೆ ಯಾಕೆ?
ಕೂದಲು ಉದುರುವಿಕೆ ತಡೆಯುತ್ತದೆ ದಾಸವಾಳದ ಎಲೆಗಳ ಅತೀ ಮುಖ್ಯ ಆರೋಗ್ಯ ಲಾಭವೆಂದರೆ ಅದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ದಾಸವಾಳದ ಎಲೆಗಳ ಪೇಸ್ಟ್ ಮಾಡಿ ಅದನ್ನು ಶಾಂಪೂ ಹಾಕಿದ ಬಳಿಕ ಹಚ್ಚಬೇಕು. ಇದು ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡಿ ಕೂದಲು ಉದುರುವಿಕೆ ತಡೆಯುತ್ತದೆ.
ಮೆಂತೆ ಕಾಳುಗಳಿನ ಉಪಯೊಗ
ಕೂದಲಿನ ಆರೋಗ್ಯಕ್ಕೆ ಮೆಂತೆ ಕಾಳುಗಳು ತುಂಬಾ ಒಳ್ಳೆಯದು. ಇದರ ಪೇಸ್ಟ್ ಮಾಡಿಕೊಂಡು ನೀವು ಕೂದಲಿನ ಆರೋಗ್ಯಕ್ಕೆ ಬಳಸಬಹುದು. ತೆಂಗಿನೆಣ್ಣೆಯಲ್ಲಿ ರಾತ್ರಿ ವೇಳೆ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಬೇಯಿಸಿ, ತಲೆಗೆ ಮಸಾಜ್ ಮಾಡಿ. ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯಲು ಇದು ತುಂಬಾ ಪ್ರಮುಖ ಮನೆಮದ್ದು. ತಲೆಹೊಟ್ಟಿನ ಸಮಸ್ಯೆಗೂ ಇದನ್ನು ಬಳಸಬಹುದು.
ಟಿಪ್ಸ್;- ತಲೆಯ ಕೂದಲನ್ನು ಪ್ರತಿದಿನ ಎರಡು ಬಾರಿ ಬಾಚ ಬೇಕು, ಉಗುರು ಬೆಚ್ಚಗಿನ ನೀರಿನಿಂದ ತಲೆ ತೋಳೆಯ ಬೇಕು, ವಾರದಲ್ಲಿ ಎರಡು ಬಾರಿ ತಲೆಸಾನ್ನ ಮಾಡಿದರೆ ಸಾಕು……
-ಪ್ರಿಯಾಂಕ ಟಿ