ಕೆಜಿಎಫ್​-2ಗೆ ಪೈಪೋಟಿ ನೀಡಿರುವ ವಿಜಯ್​ ನಟನೆಯ ಬೀಸ್ಟ್ ಸಿನಿಮಾ ಹೇಗಿದೆ? ಇಲ್ಲಿದೆ ಮೊದಲ ವಿಮರ್ಶೆ

ಕೆಜಿಎಫ್​ ಚಾಪ್ಟರ್​-2ಗೆ ತಮಿಳುನಾಡಿನಲ್ಲಿ ಪೈಪೋಟಿ ನೀಡಲು ಇಳಯದಳಪತಿ ವಿಜಯ್​ ಅಭಿನಯದ ಬೀಸ್ಟ್​ ಚಿತ್ರ ಸಜ್ಜಾಗಿದೆ. ಕೆಜಿಎಫ್​ಗಿಂತ ಒಂದು ದಿನದ ಮುಂಚೆಯೇ ಅಂದರೆ, ಏಪ್ರಿಲ್​ 13ರಂದು ಬೀಸ್ಟ್​ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿದೆ.

ಕೆಜಿಎಫ್​ ವಿರುದ್ಧ ಸ್ಪರ್ಧೆಗೆ ನಿಂತಿರುವುದರಿಂದ ಸಹಜವಾಗಿಯೇ ಬೀಸ್ಟ್​ ಚಿತ್ರದ ಮೇಲೆ ಕುತೂಹಲ ಮೂಡಿದೆ. ಹಾಗಾದರೆ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ ಸಂಧು ಬೀಸ್ಟ್​ ಚಿತ್ರದ ಮೊದಲ ವಿಮರ್ಶೆಯನ್ನು ನೀಡಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವ ಉಮೇರ್​, ಬೀಸ್ಟ್​ ಒಂದು ಚತುರ ಅಥವಾ ಜಾಣ್ಮೆಯ ಆಯಕ್ಸನ್​ ಥ್ರಿಲ್ಲರ್​ ಸಿನಿಮಾ ಎಂದಿದ್ದಾರೆ. ವಿಜಯ್​ ಅವರು ಅತ್ಯದ್ಭುತ ನಟನೆಯನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ವಿಜಯ್​ ತೆರೆಯ ಮೇಲೆ ಕಂಡಾಗಲೆಲ್ಲ ಬೇಸರದ ಕ್ಷಣ ಎಂಬುದು ಬರುವುದೇ ಇಲ್ಲ ಎನ್ನುವ ಮೂಲಕ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ವಿಜಯ್​ ಇಡೀ ಚಿತ್ರವನ್ನು ಆವರಿಸಿದ್ದಾರೆ. ಈ ಚಿತ್ರವು ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ, ನಿಮ್ಮನ್ನು ಅದರೊಳಗೆ ಸೆಳೆದುಕೊಳ್ಳುತ್ತದೆ ಮತ್ತು ಪರವಶವಾಗುವಂತೆ ಮಾಡುತ್ತದೆ. ಇನ್ನು ಚಿತ್ರದ ಸ್ಕ್ರೀನ್​ಪ್ಲೇ ಅಂತೂ ರೇಜರ್​ ಶಾರ್ಪ್​ ಎಂದಿರುವ ಉಮೇರ್​, ಅಂತಿಮವಾಗಿ ವಿಜಯ್​ ನಟನೆಯನ್ನು ಕೊಂಡಾಡಿದ್ದು, ಶಾಕಿಂಗ್​ ಮತ್ತು ಚಪ್ಪಾಳೆಗೆ ಅರ್ಹವಾಗಿರುವ ಅಮೋಘ ಅಭಿನಯ ಎಂದು ಬಣ್ಣಿಸಿದ್ದಾರೆ.

ಬೀಸ್ಟ್​ ಚಿತ್ರದ ಟ್ರೇಲರ್​ ಈಗಾಗಲೇ ಯೂಟ್ಯೂಬ್​ನಲ್ಲಿ ದಾಖಲೆ ಬರೆದಿದೆ. ಚಿತ್ರದ ಹಾಡುಗಳಂತೂ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿಸಿದೆ. ಆದರೆ, ಚಿತ್ರದಲ್ಲಿ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ನೆಗಿಟಿವ್​ ಆಗಿ ತೋರಿಸಲಾಗಿದೆ ಎಂಬ ಕಾರಣಕ್ಕೆ ಕುವೈತ್​ ಮತ್ತು ಕತಾರ್​ನಲ್ಲಿ ಈ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ. ಆದರೆ, ದುಬೈನಲ್ಲಿ ಈ ಚಿತ್ರಕ್ಕೆ ಹಸಿರು ನಿಶಾನೆ ಸಿಕ್ಕಿರುವುದು ಅಚ್ಚರಿಯ ಸಂಗತಿಯಾಗಿದೆ.

ಇನ್ನು ಚಿತ್ರವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡಿದ್ದು, ಅನಿರುದ್ಧ್​ ಸಂಗೀತ ನೀಡಿದ್ದಾರೆ. ವಿಜಯ್​ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Next Post

ಬೆಲೆಯೇರಿಕೆ ಬಗ್ಗೆ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ - ಸಿಎಂ ಬಸವರಾಜ ಬೊಮ್ಮಾಯಿ

Mon Apr 11 , 2022
ಬೆಳೆಯೇರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ( Congress Party ) ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ಅತಿಹೆಚ್ವು ಬೆಳೆಯೇರಿಕೆ ಮಾಡಿದ ಖ್ಯಾತಿ, ಕೀರ್ತಿ, ದಾಖಲೆ ಕಾಂಗ್ರೆಸ್ ನದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿ.ಎಫ್. ಐ. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸಿರುವ ಸಮಿತಿ ಪರಾಮರ್ಶೆ ಮಾಡುತ್ತಿದ್ದು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: