ರಿಲೀಸ್​ ಆಯ್ತು ಮೂರನೇ ಹಾಡು :KGF 2

 

 

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಎಂದರೆ ಕೆಜಿಎಫ್​ 2 ಎನ್ನಬಹುದು. ಏಪ್ರಿಲ್ 14ರಂದು ಎಂದರೆ ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್​ ಮೂಲಕ ಕೆಜಿಎಫ್​ 2 ಚಿತ್ರ  ನಿರೀಕ್ಷೆ ಹೆಚ್ಚಿಸಿದ್ದು, ಯಶ್​ ಅಭಿಮಾನಿಗಳು ಬಾಸ್​ ಚಿತ್ರಕ್ಕಾಗಿ  ಕಾಯುತ್ತಿದ್ದಾರೆ. ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಇನ್ನು, ಪ್ಯಾನ್​ ಇಂಡಿಯಾ ಮಟ್ಟದ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿತ್ತು. . ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿಯೂ ಸ್ಟ್ಯಾಂಡಿ ಮತ್ತು ಪೋಸ್ಟರ್​ಗಳನ್ನು ಚಿತ್ರತಂಡ ಪ್ರದರ್ಶಿಸಿದ್ದು, ಈಗಾಗಲೇ ಚಿತ್ರದ ಮೊದಲ ರಿವ್ಯೂ ಹೊರ ಬಂದಿದೆ.

ಈ ಚಿತ್ರದ ಟ್ರೇಲರ್​ ನೋಡಿದರೆ ಭರ್ಜರಿ ಆ್ಯಕ್ಷನ್​ ಜೊತೆಗೆ ಹಾಡುಗಳಿಗೂ ಹೆಚ್ಚು ಮಹತ್ವ ನೀಡಿರುವುದು ತಿಳಿಯುತ್ತದೆ. ಇನ್ನು ಕೆಜಿಎಫ್ 2 ಚಿತ್ರದ ಹಾಡುಗಳ ರೈಟ್ಸ್​ ಕೂಡ ದಾಖಲೆಯ ಮೊತ್ತಕ್ಕೆ ಮಾರಾಟವಾಗಿತ್ತು, ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ವಸಿಷ್ಠ ಸಿಂಹ, ಪ್ರಕಾಶ್​ ರಾಜ್​, ರಾವ್​ ರಮೇಶ್​ ಸೇರಿದಂತೆ ಘಟಾನುಘಟಿ ಕಲಾವಿದರ ದಂಡಿದ್ದು.

ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ವಿಶ್ವಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾಯುತ್ತಿದ್ದಾರೆ. ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಮೊದಲ ದಿನ 504 ಶೋ ಪ್ರದರ್ಶನ ಕಂಡ 'ಬೀಸ್ಟ್'

Wed Apr 13 , 2022
    ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ APRIL 13 ರಂದು ಬಿಡುಗಡೆ ಆಗಿದೆ. ಬೇರೆ ಸಮಯದಲ್ಲಾಗಿದ್ದಿದ್ದರೆ ಈ ಸಿನಿಮಾಕ್ಕೆ ವಿಶೇಷ ಮಹತ್ವ ಇರುತ್ತಿರಲಿಲ್ಲ. ಆದರೆ ಕನ್ನಡದ ‘ಕೆಜಿಎಫ್ 2’ಗೆ ಎದುರಾಗಿ ಈ ಸಿನಿಮಾ ಬರುತ್ತಿರುವ ಕಾರಣ ಕರ್ನಾಟಕದಲ್ಲಿ ತುಸು ಹೆಚ್ಚಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ. ‘ಬೀಸ್ಟ್’ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: