ಸಿನಿಪ್ರಿಯರ ವಲಯದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸಖತ್ ಹೈಪ್ ಸೃಷ್ಟಿ ಮಾಡಿದೆ. ಅಭಿಮಾನಿಗಳ ಕ್ರೇಜ್ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.ಕನ್ನಡ ಚಿತ್ರರಂಗದ ಹೆಮ್ಮೆಯ ನಟನಾಗಿ ಯಶ್ (Yash) ಬೆಳೆದುನಿಂತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಖ್ಯಾತಿ ಹೆಚ್ಚಿದೆ.
ಈಗ ಅವರ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಬಿಡುಗಡೆಗೆ ಸಜ್ಜಾಗಿದೆ. ಏ.14ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ. ನಿರ್ದೇಶಕ ಪ್ರಶಾಂತ್ ನೀಲ್, ಹೀರೋ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಕೆಜಿಎಫ್ 2‘ ಸಿನಿಮಾ ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಅನುಮಾನ ಇಲ್ಲ. ಆದರೆ ಅದಕ್ಕೂ ಮುನ್ನವೇ ಅಭಿಮಾನಿಗಳು ಹೊಸದೊಂದು ದಾಖಲೆ ಮಾಡಿದ್ದಾರೆ. ಯಶ್ ಅವರ ಅತಿ ದೊಡ್ಡ ಮೊಸಾಯಿಕ್ ಬುಕ್ ಪೋಟ್ರೇಟ್ (Mosaic Portrait) ರಚಿಸಲಾಗಿದೆ. ಇದು ಬರೋಬ್ಬರಿ 21,600 ಚದರ ಅಡಿ ಇದೆ. ಇದಕ್ಕಾಗಿ 20,700 ಬುಕ್ಗಳನ್ನ ಬಳಸಲಾಗಿದೆ. ಮಾಲೂರಿನ ವೈಟ್ ಗಾರ್ಡನ್ ಗ್ರೌಂಡ್ಸ್ನಲ್ಲಿ ಈ ಪೋಟ್ರೇಟ್ ಮಾಡಲಾಗಿದೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.
Like this:
Like Loading...
Mon Apr 11 , 2022
ವಿದೇಶಗಳಲ್ಲಿ ಡೇಟಿಂಗ್ ಆ್ಯಪ್ ಬಳಸಿದಷ್ಟು ಭಾರತೀಯರು ಬಳಸುವುದಿಲ್ಲ. ಆದರೆ ಫಾರಿನ್ನಲ್ಲಿ ಇದು ತುಂಬಾ ಕಾಮನ್. ಬೇಕೆಂದಾಗ ಡೇಟಿಂಗ್ ಆ್ಯಪ್ ಬಳಸೋದು ಬಿಡೋದು ಅವರವರ ಇಷ್ಟ. ಬಹಳಷ್ಟು ಜನರು ಒಂಟಿತನ ಕಳೆಯಲು, ಸುಂದರವಾಗಿ ದಿನ ಕಳೆಯಲು, ಸಂಗಾತಿಗಾಗಿ ಡೇಟ್ ಮಾಡುತ್ತಾರೆ. ಆದರೆ ಈಕೆಯಂತಹ ಉದ್ದೇಶ ಬಹುಶಃ ಬೇರೆ ಯಾರಿಗೂ ಇರದು. ಡೇಟಿಂಗ್ ಆ್ಯಪ್ ಡೌನ್ಲೋಡ್ ಮಾಡುವಾಗ ಈಕೆಗೆ ಸ್ಪಷ್ಟ ಉದ್ದೇಶವಿತ್ತು. ಆಕೆಯ ಉದ್ದೇಶ ಸಾಧಿಸಿದ್ದಾಳೆ ಕೂಡಾ. ಒಂದು ರೀತಿಯಲ್ಲಿ […]