ಥಿಯೇಟರ್ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ

 

ಕೆಜಿಎಫ್’ ಸಿನಿಮಾ ಸರಣಿ ವಿಶ್ವದಾದ್ಯಂತ ಸಿನಿಮಾ ಅಭಿಮಾನಿಗಳನ್ನು ಸೆಳೆದಿದೆ. ಈ ಸಿನಿಮಾದ ಕತೆ ನಡೆಯುವುದು ಕರ್ನಾಟಕದ ಕೆಜಿಎಫ್ನಲ್ಲಿ ಅಂದರೆ ಕೋಲಾರ್ ಗೋಲ್ಡ್ ಫೀಲ್ಡ್ನಲ್ಲಿ.

 

ಕೋಲಾರ ತಾಲ್ಲೂಕಿನ ಕೆಜಿಎಫ್ ತಾಲ್ಲೂಕು ಕೇಂದ್ರವಾಗಿದ್ದು ಚಿನ್ನದ ಗಣಿ ಇದ್ದಿದ್ದು ಇಲ್ಲಿಯೇ. ‘ಕೆಜಿಎಫ್’ ಸಿನಿಮಾದಲ್ಲಿ ತೋರಿಸಿರುವುದು ಕಲ್ಪಿತ ಕತೆಯಾದರೂ, ಹಲವು ಸಿನಿಮಾಗಳಿಗೆ ಸರಕಾಗುವಷ್ಟು ಕತೆಗಳು ಕೆಜಿಎಫ್ನ ಗಲ್ಲಿಗಳಲ್ಲಿವೆ.

 

ಆದರೆ ಇಷ್ಟು ದಿನ ಕೆಜಿಎಫ್ ತಾಲ್ಲೂಕು ಅಷ್ಟಾಗಿ ಸುದ್ದಿಯಾಗಲಿ, ಸದ್ದಾಗಲಿ ಆಗಿರಲಿಲ್ಲ. ‘ಕೆಜಿಎಫ್’ ಸಿನಿಮಾ ಬಿಡುಗಡೆ ಆದ ಬಳಿಕ ಈ ಸ್ಥಳ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ‘ಕೆಜಿಎಫ್’ ಸಿನಿಮಾದ ಚಿತ್ರೀಕರಣ ನಡೆದಿರುವ ಸೈನೈಡ್ ಗುಡ್ಡ ಇರುವುದು ಸಹ ಕೆಜಿಎಫ್ನಲ್ಲಿಯೇ.

 

ವೈಚಿತ್ರ್ಯವೆಂದರೆ ಅದೇ ಊರಿನ ಹೆಸರಿಟ್ಟುಕೊಂಡು, ಅದೇ ಊರಿನ ಕತೆಯಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಸಿನಿಮಾ ಕೆಜಿಎಫ್ನಲ್ಲಿಯೇ ಬಿಡುಗಡೆ ಆಗಿಲ್ಲ. ವಿಚಿತ್ರವಾದರೂ ಇದು ಸತ್ಯ. ‘ಕೆಜಿಎಫ್ 2’ ಸಿನಿಮಾ ಕೆಜಿಎಫ್ನಲ್ಲಿಯೇ ಬಿಡುಗಡೆ ಆಗಿಲ್ಲ. ಇದಕ್ಕೆ ಕಾರಣ ವಿತರಕ ಹಾಗೂ ಸಿನಿಮಾ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಕಚ್ಚಾ ತೈಲ ಮತ್ತಷ್ಟು ದುಬಾರಿ, ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೀಗಿದೆ?

Thu Apr 14 , 2022
 ಪೆಟ್ರೋಲ್ , ಡೀಸೆಲ್‌ ಬೆಲೆ ಏರಿಕೆಗೆ ಕಳೆದ 8 ದಿನಗಳಿಂದ ಬ್ರೇಕ್‌ ಬಿದ್ದಿದೆ. ಕಚ್ಚಾ ತೈಲ ಬೆಲೆ ಮತ್ತಷ್ಟು ಗಗನಮುಖಿಯಾಗುತ್ತಿದ್ದರೂ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜಯ ರಾಜಧಾನಿ ಮುಂಬೈ ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: