ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡಗಡೆಯಾಗಿದ್ದು, ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿದೆ. ರಾಜ್ಯದಲ್ಲಿ ಯಶ್ ಅಭಿಮಾನಿಗಳು ರಾತ್ರಿಯಿಂದಲೇ ಥಿಯೇಟರ್ ಬಳಿ ಬಂದಿದ್ದು, ಯಶ್ ಕಟೌಟ್ಗೆ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ., ಬೆಳಂ ಬೆಳಗ್ಗೆ ಹುಮ್ಮಸ್ಸಿನಿಂದಲೇ ಥಿಯೇಟರ್ ಗೆ ಯಶ್ ಫ್ಯಾನ್ ಆಗಮಿಸುತ್ತಿದ್ದು ಯಶ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ರಾಕಿಭಾಯ್ ಹವಾ
5ಭಾಷೆಗಳಲ್ಲಿ 70ಕ್ಕೂ ಹೆಚ್ಚು ದೇಶಗಳಲ್ಲಿ ಕೆಜಿಎಫ್ ಚಾಪ್ಟರ್- 2 ರಿಲೀಸ್ ಆಗಿದ್ದು
ಭರ್ಜರಿ ಪ್ರದರ್ಶನ ಕಂಡಿದೆ . ಸಿನೆಮಾ ನೊಡಿ ಯಶ್ ಅಭಿಮಾನಿಗಳು ಎಲ್ಲೆಡೆ ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ ಅದು ಅಲ್ಲದೇ ಭಾರತೀಯ ಸಿನೆಮಾ ಒಂದು ಇಷ್ಟೋಂದು ದೇಶ ಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಇ ಮೂಲಕ ಯಶ್ ಅಂತರಾಷ್ಟ್ರೀಯ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada