ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.ಈ ನಡುವೆ ನಿಧಾನವಾಗಿ ಚಿತ್ರತಂಡ ಚಿತ್ರದ ಪ್ರಮೋಷನ್ ಅನ್ನು ಪ್ರಾರಂಭಿಸಿದೆ.
ಹೌದು,ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ ಮಾರ್ಚ್ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಅದೇ ರೀತಿಯಲ್ಲಿ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.ಇದನ್ನು ಕೇಳಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಹೌದು,ಮಾ.21ರಂದು ‘ತೂಫಾನ್’ ಎಂಬ ಲಿರಿಕಲ್ ಸಾಂಗ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಕೆಜಿಎಫ್-2 ಚಿತ್ರದ ಮೊದಲ ಲಿರಿಕಲ್ ಸಾಂಗ್ ಆದ ತೂಫಾನ್ ಹಾಡು ಮಾರ್ಚ್ 21ರಂದು ಬೆಳಗ್ಗೆ 11.07ಕ್ಕೆ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಸ್ಮ್ ಟ್ವಿಟರ್ ಮೂಲಕ ತಿಳಿಸಿದೆ.ಈ ಸಾಂಗ್ ಕನ್ನಡ,ಹಿಂದಿ,ತೆಲುಗು, ತಮಿಳು ಹಾಗೂ ಮಲಿಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈಗಾಗಲೇ ಕೆಜಿಎಫ್ 1 ರಲ್ಲಿ ರವಿ ಬಸ್ರೂರು ಅವರ ಸಂಗೀತ ಎಲ್ಲಡೇ ಸಖತ್ ಹಿಟ್ ಆಗಿದ್ದವು.ಹೀಗಾಗಿ ಕೆಜಿಎಫ್ 2ರ ಈ ಮೊದಲ ಸಾಂಗ್ ಮೇಲೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.
ಈ ಹೊತ್ತಲ್ಲೇ ಟ್ರೈಲರ್ ರಿಲೀಸ್ಗೂ ಸಿದ್ಧತೆ ನಡೆದಿದೆ.ಹೌದು, ಮಾರ್ಚ್ 27ಕ್ಕೆ ಸಂಜೆ 6:40ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಗಲಿದೆ. ಟ್ರೈಲರ್ ಬಿಡುಗಡೆಯ ನಂತರ ಕೆಜಿಎಫ್ -2 ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಲಿದೆ.