ಕಿಚ್ಚನ ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಲಿರುವ ರೋಣ. ವಿಕ್ರಾಂತ್ ರೋಣ ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗವೇ ಬಹಳ ಕಾತುರದಿಂದ ಕಾಯುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ಗಳು ಫ್ಯಾನ್ಸ್ಗಿದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಕೊರೊನಾ ಕಾರಣದಿಂದಾಗಿ ಫೆಬ್ರವರಿಯಲ್ಲಿ ತೆರೆಕಾಣಬೇಕಿದ್ದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತು. ಆದರೆ ಚಿತ್ರತಂಡ ಮಾತ್ರ ನಿರಂತರವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದೆ. ಇಂದು ಚಿತ್ರತಂಡ ಹೊಸ ಅಪ್ಡೇಟ್ ಯೊಂದನ್ನ ನೀಡಿದೆ. ಈ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯುಗಾದಿಗೆ ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ. ಏಪ್ರಿಲ್ 2ರಂದು ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣ ರಿಲೀಸ್ ಟೀಸರ್ ಬಿಡುಗಡೆಯಾಗುತ್ತದೆ. ಎಂದು ತಿಳಿಸಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಈ ಸಿನಿಮಾವನ್ನ ಅನೂಪ್ ಭಂಡಾರಿ ನಿರ್ದೇಶಿಸಿದ್ದು, ನಟ ಕಿಚ್ಚ ಸುದೀಪ್ ಈವರೆಗೂ ಮಾಡಿರುವ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿದೆ. ಬಹುತೇಕ ಕಥೆ ಕಾಡಿನಲ್ಲೇ ಸಾಗುವುದರಿಂದ ಅದ್ದೂರಿ ಕಾಡಿನ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಅರಣ್ಯದ ಸನ್ನಿವೇಶಗಳನ್ನು ಚಿತ್ರೀಕರಿಸಲು ಹೈದರಾಬಾದ್ನಲ್ಲಿ ಬೃಹತ್ ಕಾಡಿನ ಸೆಟ್ ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಹೈದರಾಬಾದ್, ಬೆಂಗಳೂರು, ಕೇರಳ ಭಾಗದಲ್ಲಿ ವಿಕ್ರಾಂತ್ ರೋಣ ಚಿತ್ರೀಕರಣ ಮಾಡಲಾಗಿದೆ. ಸುದೀಪ್ ವಿಕ್ರಾಂತ್ ರೋಣ ಪಾತ್ರಕ್ಕೆ ಜೀವ ತುಂಬಿದ್ದು, ಇದೊಂದು ರೆಟ್ರೋ ಕಾಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada