ಇಟಲಿ ಮೂಲದ ಪ್ರಖ್ಯಾತಫೆರೆರೊ ಕಂಪನಿಯ ಕಿಂಡರ್ ಉತ್ಪನ್ನಗಳನ್ನು ಸೇವಿಸದಂತೆ ಬ್ರಿಟನ್ನಿನ ಆಹಾರ ಗುಣಮಟ್ಟ ಏಜೆನ್ಸಿ (ಎಫ್ ಎಸ್ ಎ) ಗ್ರಾಹಕರಿಗೆ ಸಲಹೆ ನೀಡಿದೆ. ಕಿಂಡರ್ ಉತ್ಪನ್ನಗಳಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗುವ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ಜು.11,2020 ರಿಂದ ಅ,7,2020ರ ವರೆಗೆ ಬಳಸಬಹುದಾದ ಅವಧಿ ಹೊಂದಿರುವ ಕಿಂಡರ್ ಎಗ್ ಸರ್ ಪ್ರೈಸ್ ಚಾಕೋಲೆಟ್ ಸೇವಿಸದಂತೆ ಸೂಚಿಸಿದೆ. ಬ್ರಿಟನ್ನಿನಾದ್ಯಂತ ಇತ್ತೀಚೆಗೆ ಕನಿಷ್ಠ 63 ಸಲ್ಮೋನೆಲ್ಲಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಯುಕೆ ಆರೋಗ್ಯ ಭದ್ರತಾ ಏಜೆನ್ಸಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಈ ಪ್ರಕರಣಗಳಿಗೂ ಕಿಂಡರ್ ಅಥಾವ ಫೆರೆರೊಕಂಪನಿ ಉತ್ಪನ್ನಗಳಿಗೂ ಸಂಬಂಧ ಇರುವುದು ದೃಢವಾಗಿದೆ.
ಏನಿದುಸಾಲ್ಮೋನೆಲ್ಲಾ?
ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ, ಆಹಾರದ ಮೂಲಕ ಇದು ಮಾಮವನ ದೇಹಕ್ಕೆ ಸೇರಿ ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ ಮತ್ತು ಜ್ವರಕ್ಕೆ ಕಾರಣವಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada