ಬೇಸಿಗೆಯಲ್ಲಿ ಜನ ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿಯು ಕೂಡಾ ಒಂದು. ಕಲ್ಲಂಗಡಿ ಜ್ಯೂಸ್ ಮಾಡಿ ಕುಡಿದರೆ ದೇಹ ತಣ್ಣಗಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ನೀವು ಕಲ್ಲಂಗಡಿ ಕತ್ತರಿಸಿ ಜ್ಯೂಸ್ ಮಾಡಿದ ಮೇಲೆ ಅದರ ಬೀಜವನ್ನ ಎಸೆಯುತ್ತಿರಾ. ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಹಲವರು ಪ್ರಯೊಜನಗಳಿವೆ. ಬೀಜ ಅಗತ್ಯವಿಲ್ಲ ಎಂದು ಎಸೆಯುವ ಮುನ್ನಾ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ. *ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. […]