ಬೇಲೂರು: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ಮೃತ ವಿದ್ಯಾರ್ಥಿಗಳು ಬೇಲೂರಿನ ವಿದ್ಯಾವಿಕಾಸ್ ಶಾಲೆಯ ವಿದ್ಯಾರ್ಥಿಗಳು.ಮಂಗಳವಾರ ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಮತ್ತು ಸಾರ್ವಜನಿಕರು ಹರಸಾಹಸಪಟ್ಟರು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. (ಇದಿಷ್ಟು ಪ್ರಾಥಮಿಕ ಮಾಹಿತಿ)
ಬೀಜಿಂಗ್ , ಮಾ.22- ಚೀನಾದ ದಕ್ಷಿಣ ಪರ್ವತ ಪ್ರದೇಶದಲ್ಲಿ ಪತನಗೊಂಡ ಈಸ್ಟರ್ನ್ ಏರ್ಲೃನ್ ವಿಮಾನದ ಅವಶೇಷಗಳ ಹುಡುಕಾಟ ಇಂದೂ ಮುಂದುವರಿದಿದ್ದು, ಇದುವರೆಗೆ ಯಾವುದೇ ಬದುಕುಳಿದವರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ 123 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯ ಬಗ್ಗೆ ಇನ್ನೂ ಯಾವುದೇ ಅಕೃತ ಮಹಿತಿಯ ಇಲ್ಲ,ಪ್ರಸ್ತುತ ವಿಮಾನವು ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ ಎಂದು ಪರಿಗಣಿಸಲಾಗಿದೆ.ಆದರೆ ಯಾರಾದರೂ ಬದುಕುಳಿದಿದ್ದಾರೆ ಎಂಬುವುದು ತೀರ ಕಡಿಮೆ.ಬ್ಲಾಕ್ ಬಾಕ್ಸ್ ಬಗ್ಗೆಯು ಯಾವುದೇ ಸುದ್ದಿಯಿಲ್ಲ, […]