ಬಪ್ಪಿ ಲಹರಿಯ ಪ್ರೀತಿಯ ಚಿನ್ನಾಭರಣಗಳು ಏನಾದವು…?

ಬಪ್ಪಿ ಲಹರಿ 2022ರ ಫೆಬ್ರವರಿ 15ರಂದು ನಿಧನರಾಗಿದ್ದಾರೆ. ಇವರ ಪುತ್ರ ಬಪ್ಪ ಲಹಿರಿ ಈ ವಿಚಾರವಾಗಿ ಮಾತನಾಡಿದ್ದು, ನಮ್ಮ ತಂದೆಗೆ ಅದು ಕೇವಲ ಆಭರಣ ಮಾತ್ರವಾಗಿರಲಿಲ್ಲ. ಬದಲಾಗಿ ಅದು ಅವರಿಗೆ ಅದೃಷ್ಟದ ಸಂಕೇತ ಕೂಡ ಆಗಿತ್ತು. ವಿಶ್ವದ ಅನೇಕ ಮೂಲೆಗಳಿಂದ ಅವರು ಆಭರಣಗಳನ್ನು ಸಂಗ್ರಹಿಸಿದ್ದರು ಎಂದು ಹೇಳಿದ್ದಾರೆ.ಹಾಗಾದರೆ ಅವರ ಪ್ರೀತಿಯ ಚಿನ್ನದ ಆಭರಣಗಳು ಏನಾದವು..? ಈ ಪ್ರಶ್ನೆಗೆ ಬಪ್ಪಿ ಲಹರಿ ಪುತ್ರ ಬಪ್ಪಾ ಉತ್ತರ ನೀಡಿದ್ದಾರೆ. ನನ್ನ ತಂದೆ ಚಿನ್ನದ ಆಭರಣವಿಲ್ಲದೇ ಎಲ್ಲಿಗೂ ತೆರಳುತ್ತಿರಲಿಲ್ಲ. ಬೆಳಗ್ಗೆ 5 ಗಂಟೆ ವಿಮಾನವಿದ್ದರೂ ಸಹ ಅವರು ತಮ್ಮ ಚಿನ್ನದ ಆಭರಣವನ್ನು ಧರಿಸಲು ಮರೆಯುತ್ತಿರಲಿಲ್ಲ. ಅದು ಒಂದು ರೀತಿ ಅವರಿಗೆ ಶಕ್ತಿಯಾಗಿತ್ತು. ಹೀಗಾಗಿ ನಾವು ತಂದೆಯ ಎಲ್ಲಾ ಆಭರಣಗಳನ್ನು ರಕ್ಷಿಸಲು ನಿರ್ಧರಿಸಿದ್ದೇವೆ. ಇದನ್ನು ನಾವು ಮ್ಯೂಸಿಯಂನಲ್ಲಿ ಇಡುವ ಬಗ್ಗೆ ಯೋಚಿಸುತ್ತಿದ್ದೇವೆ. ಅವರ ಪ್ರೀತಿಯ ಆಭರಣ, ಸನ್​ಗ್ಲಾಸ್​, ಹ್ಯಾಟ್​ಗಳು, ವಾಚುಗಳು ಎಲ್ಲವನ್ನೂ ಮ್ಯೂಸಿಯಂನಲ್ಲಿ ಇಡುತ್ತೇವೆ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

 

Leave a Reply

Your email address will not be published. Required fields are marked *

Next Post

ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ವೀಕ್ಷಿಸಲು ಬರುವ ಪ್ರಯಾಣಿಕರಿಂದ ಹಣ ಪಡೆಯಲು ನಿರಾಕರಿಸಿದ ಆಟೋ ಚಾಲಕ.

Thu Mar 24 , 2022
ಅನುಪೋಮ್ ಖೇರ್ ಅಭಿನಯದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಬಿಡುಗಡೆಯಾದಾಗಿನಿಂದ ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ. ಈ ಚಲನಚಿತ್ರವನ್ನು ನೋಡಲು ಬರುವವರಿಗೆ ಆಟೋ ಚಾಲಕನೊಬ್ಬ ತೋರಿದ ಮಾನವೀಯತೆಗೆ ಅಗ್ನಿಹೋತ್ರಿ ಅವರೇ ಅಭಿಮಾನಿಯಾಗಿದ್ದಾರೆ. ಆದ್ರೆ ಅಭಿಮಾನಿಯ ಮಾಡಿದ ಕೆಲಸವೇನು ಅಂತಾ ಇಲ್ಲಿ ನೋಡಿ. भारत। मानवता। शत शत नमन।कृतज्ञ। ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾವನ್ನು ವೀಕ್ಷಿಸಲು ಹೋಗುವವರಿಗೆ ಹಣವನ್ನು ವಿಧಿಸಲು ಆಟೋ ಚಾಲಕ ನಿರಾಕರಿಸಿದ್ದಾನೆ, ಮಹಿಳೆಯೊಬ್ಬರು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: