ಬಜಾರಿಯಾ ಮಾರುಕಟ್ಟೆ ಪ್ರದೇಶದಲ್ಲಿರುವ ಉಗ್ರಾಣವೊಂದನ್ನು ಟಾರ್ಗೆಟ್ ಮಾಡಿದ್ದ ಕಳ್ಳರು ಅಲ್ಲಿಂದ 60 ಕೆ.ಜಿ ಗಳಷ್ಟು ನಿಂಬೆ ಕದ್ದಿದ್ದಾರೆಂದು ವರದಿಯಾಗಿದೆ.
ಕಳೆದ ಕೆಲ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳ ಬೆಲೆ ವಿಪರೀತ ಹೆಚ್ಚಳವಾಗಿದೆ. ಈ ಹೆಚ್ಚಳ ಈಗ ಉತ್ತರ ಪ್ರದೇಶದಲ್ಲಿ ಮಾಡಲು ಕಳ್ಳರನ್ನು ಸೆಳೆದಿವೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಉತ್ತರ ಪ್ರದೇಶ ರಾಜ್ಯದ ಶಹಜಾಹಾನ್ಪೂರ್ ಮತ್ತು ಬರೇಲಿ ಎಂಬ ಎರಡು ಜಿಲ್ಲೆಗಳಲ್ಲಿ ಲೂಟಿಕೋರರಿಂದ ನೂರು ಕೆ.ಜಿಗೂ ಹೆಚ್ಚಿನ ಪ್ರಮಾಣದ ನಿಂಬೆ ಹಣ್ಣುಗಳ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದೆ. ಪ್ರಸ್ತುತ, ನಿಂಬೆ ಹಣ್ಣುಗಳು ಪ್ರತಿ ಕೆಜಿಗೆ 250 ರೂ. ಮಾರಾಟವಾಗುತ್ತಿವೆ ಎನ್ನಲಾಗಿದೆ.
ಭಾನುವಾರ ರಾತ್ರಿ ಶಹಜಹಾನ್ಪುರ್ ಎಂಬಲ್ಲಿ ನಿಂಬೆ ಕಳ್ಳತನದ ಬಗ್ಗೆ ಮೊದಲ ವರದಿಯಾಗಿತ್ತು. ಈ ಸಂದರ್ಭದಲ್ಲಿ ಬಜಾರಿಯಾ ಮಾರುಕಟ್ಟೆ ಪ್ರದೇಶದಲ್ಲಿರುವ ಉಗ್ರಾಣವೊಂದನ್ನು ಟಾರ್ಗೆಟ್ ಮಾಡಿದ್ದ ಕಳ್ಳರು ಅಲ್ಲಿಂದ 60 ಕೆ.ಜಿ ಗಳಷ್ಟು ನಿಂಬೆ ಕದ್ದಿದ್ದಾರೆಂದು ವರದಿಯಾಗಿದೆ. ಒಂದೊಮ್ಮೆ ಕಳ್ಳತನಕ್ಕೆಂದು ಉಗ್ರಾಣ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಇತರೆ ವಸ್ತುಗಳನ್ನು ಹಾಗೆ ಬಿಡುತ್ತಾರೆಯೇ..? ಸಾಧ್ಯವಾದಷ್ಟು ಎಲ್ಲವನ್ನೂ ಎಗರಿಸೋಣ ಎಂಬ ಉದ್ದೇಶ ಹೊಂದಿದಂತಿದ್ದ ಕಳ್ಳರು ನಿಂಬೆ ಹೊರತುಪಡಿಸಿ 40 ಕೆಜಿಗಳಷ್ಟು ಈರುಳ್ಳಿ ಹಾಗೂ 38 ಕೆ.ಜಿ ಗಳಷ್ಟು ಬೆಳ್ಳುಳ್ಳಿಯನ್ನೂ ಸಹ ಎಗರಿಸಿ ಕಾಲು ಕಿತ್ತಿದ್ದಾರೆಂದು ತಿಳಿದುಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada