ಮಾರ್ಚ್ 24: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ನಿರಂತರವಾಗಿ ಎರಡು ದಿನ ಏರಿಕೆ ಆಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್ಜಿ) ಹಾಗೂ ಪೈಪ್ ಲೈನ್ ಮೂಲಕ ಒದಗಿಸುವ ನೈಸರ್ಗಿಕ ಅನಿಲ(ಪಿಎನ್ಜಿ)ದ ಬೆಲೆ ಏರಿಕೆಗೆ ಅದು ಕಾರಣವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಂಧ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್ಜಿ ಬೆಲೆಯಲ್ಲಿ 1 ರೂಪಾಯಿ ಹೆಚ್ಚಿಸಿದೆ. ಮಾರ್ಚ್ 24ರಂದು ಒಂದು ಕೆಜಿಗೆ 59.01 ರೂಪಾಯಿ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ 137 ದಿನಗಳ ಬಳಿಕ ಎರಡು ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿತ್ತು. ಮಂಗಳವಾರ ಮತ್ತು ಬುಧವಾರ ಎರಡು ದಿನ 80 ಪೈಸೆ ಏರಿಕೆಯಾಗಿದ್ದು, ಇದೀಗ ಗ್ಯಾಸ್ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಬೆಲೆ ಏರಿಕೆಯ ಜೊತೆಗೆ ಅಡುಗೆ ಅನಿಲದ ಬೆಲೆಯು ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಎನ್ಜಿ ದರ
– ದೆಹಲಿಯ ಎನ್ ಸಿಟಿ – ಕೆಜಿಗೆ 59.01 ರೂಪಾಯಿ
– ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ – ಕೆಜಿಗೆ 61.58 ರೂಪಾಯಿ
– ಮುಜಾಫರ್ ನಗರ, ಮೀರತ್, ಶಾಮ್ಲಿ – ಕೆಜಿಗೆ 66.26 ರೂಪಾಯಿ
– ಗುರುಗ್ರಾಮ್ – ಕೆಜಿಗೆ 67.37 ರೂಪಾಯಿ
– ರೆವಾರಿ – ಕೆಜಿಗೆ 69.48 ರೂಪಾಯಿ
– ಕರ್ನಾಲ್ ಮತ್ತು ಕೈಥಾಲ್ – ಕೆಜಿಗೆ 67.68 ರೂಪಾಯಿ
– ಕಾನ್ಪುರ್, ಹಮೀರ್ ಪುರ್, ಫತೇಪುರ್ – ಕೆಜಿಗೆ 70.82 ರೂಪಾಯಿ
– ಅಜ್ಮೀರ್, ಪಾಲಿ, ರಾಜಸಮಂದ್ – ಕೆಜಿಗೆ 69.31 ರೂಪಾಯಿ
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಿಎನ್ಜಿ ದರ
ದೆಹಲಿಯ – ಪ್ರತಿ ಯೂನಿಟ್ಗೆ 36.61 ರೂಪಾಯಿ
– ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ – ಪ್ರತಿ ಯೂನಿಟ್ಗೆ 35.85 ರೂಪಾಯಿ
– ಮುಜಾಫರ್ ನಗರ, ಮೀರತ್, ಶಾಮ್ಲಿ – ಪ್ರತಿ ಯೂನಿಟ್ಗೆ 39.37 ರೂಪಾಯಿ
– ಗುರುಗ್ರಾಮ್ – ಪ್ರತಿ ಯೂನಿಟ್ಗೆ 34.81 ರೂಪಾಯಿ
– ಕರ್ನಾಲ್ ಮತ್ತು ರೆವಾರಿ – ಪ್ರತಿ ಯೂನಿಟ್ಗೆ 35.42 ರೂಪಾಯಿ
– ಅಜ್ಮೀರ್, ಪಾಲಿ, ರಾಜಸಮಂದ್ – ಪ್ರತಿ ಯೂನಿಟ್ಗೆ 42.02 ರೂಪಾಯಿ
ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ದರ
ಭಾರತದಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಆಗಿದೆ. 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರವು 949.50 ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ಅಕ್ಟೋಬರ್ 6, 2021ರಂದು ಕೊನೆಯ ಬಾರಿಗೆ ಸಿಲಿಂಡರ್ ದರವನ್ನು ಪರಿಷ್ಕರಿಸಲಾಗಿತ್ತು. ತದನಂತರದಲ್ಲಿ ಪಂಚರಾಜ್ಯ ಚುನಾವಣೆ ಹಿನ್ನೆಲೆ ಯಾವುದೇ ರೀತಿ ಬೆಲೆ ಏರಿಕೆ ಕಂಡು ಬಂದಿರಲಿಲ್ಲ. ಆದರೆ ಅದಕ್ಕೂ ಮೊದಲು ಅಂದರೆ ಜುಲೈನಿಂದ ಅಕ್ಟೋಬರ್ 6ರವರೆಗೆ ಒಟ್ಟು 100 ರೂಪಾಯಿ ಹೆಚ್ಚಳವಾಗಿತ್ತು.ಮಾರ್ಚ್ 24ರಂದು ಬದಲಾಗಿಲ್ಲ ಪೆಟ್ರೋಲ್-ಡೀಸೆಲ್ ಬೆಲೆ.
ಭಾರತದ ಪ್ರಮುಖ ನಗರಗಳಲ್ಲಿ 137 ದಿನಗಳ ಬಳಿಕ ಎರಡು ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿತ್ತು. ಮಂಗಳವಾರ ಮತ್ತು ಬುಧವಾರ ಎರಡು ದಿನ 80 ಪೈಸೆ ಏರಿಕೆ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಗುರವಾರ ಸ್ಥಿರವಾಗಿದೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 114 ಯುಎಸ್ ಡಾಲರ್ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada