ಮಹಾವಿರ್ಯಾರ ಚಿತ್ರದ ಟೀಸರ್ ರಿಲೀಸ್

 

ಮಾಲಿವುಡ್ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿರುವ, ಶಾನ್ವಿ ಶ್ರೀವಾತ್ಸವ ನಾಯಕಿಯಾಗಿ ನಟಿಸಿರುವ  ಬಹುನಿರೀಕ್ಷಿತ ಮಲಯಾಳಂನ ‘ಮಹಾವಿರ್ಯಾರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆ. ಟೈಮ್​ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರ ಮಾತನಾಡಲಿದೆ. ವಿಶೇಷ ಏನೆಂದರೆ ನಿವಿನ್ ಅವರ ಹೋಮ್ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್​ ಶ್ಯಾಮ್​ನಾಸ್​ಅವರ ಇಂಡಿಯನ್ ಮೂವಿ ಮೇಕರ್ಸ್ ಸಂಸ್ಥೆಯೂ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.

 

ವಿಶೇಷ ಏನೆಂದರೆ ಈ ಹಿಂದೆ ನಿವಿನ್ ಜತೆಗೆ ‘1983‘ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್, ‘ಮಹಾವಿರ್ಯಾರ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಮೂರನೇ ಬಾರಿ ಒಂದಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿಮಿನ್ ಮತ್ತು ಆಸಿಫ್ ಅಲಿ ಒಟ್ಟಿಗೆ ನಟಿಸದೇ 10 ವರ್ಷವಾಯ್ತು. ಇದೀಗ ದಶಕದ ಬಳಿಕ ಈ ಜೋಡಿ ಒಂದಾಗಿದೆ.

 

ಚಿತ್ರದಲ್ಲಿ ಲಾಲ್, ಲಾಲು ಅಲೆಕ್ಸ್, ಸಿದ್ದೀಕಿ, ಶಾನ್ವಿ ಶ್ರೀವಾತ್ಸವ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್ ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್ ಸೇರಿ ಹಲವರು ನಟಿಸಿದ್ದಾರೆ. ಕರೊನಾ ಹಾವಳಿ ನಡುವೆಯೂ ದೊಡ್ಡ ಬಜೆಟ್​ನ ಈ ಸಿನಿಮಾದ ಶೂಟಿಂಗ್​ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದ್ದು, ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ. ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

"ಯುಗಾದಿ ಹಬ್ಬಕ್ಕೆ ಉಪ್ಪಿ ಗಿಫ್ಟ್" 

Tue Apr 5 , 2022
  ಹೊಸ ಪೋಸ್ಟರ್ ಬಿಡುಗಡೆಗೊಳಿಸಿ “ಕಂಡ್ಹಿಡಿ ನೋಡನ” ಎಂದ ರಿಯಲ್ ಸ್ಟಾರ್ , ಸೂಪರ್‌ಸ್ಟಾರ್ ಉಪೇಂದ್ರ ಶಶಿಕುಮಾರ್, ದಿವ್ಯಚಂದ್ರಧರ, ಯೋಗೇಶ್ ಕೆ ಗೌಡ ನಿರ್ಮಾಣದ,  ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶನದ ಮತ್ತು ಪ್ರಣವ ಸೂರ್ಯ ಅಭಿನಯದ “ಕಂಡ್ಡಿಡಿ ನೋಡನ”  ಚಿತ್ರದ ಪೋಸ್ಟರ್ ಮತ್ತು ಸಿನಿಮಾ ಥೀಮ್ ಮ್ಯೂಸಿಕ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಅನಾವರಣ ಗೊಳಿಸಿದರು. ಈ ಸಮಯದಲ್ಲಿ ಚಿತ್ರದ ಒಂದು ಗೀತೆಯ ಕ್ರಿಯೇಟಿವ್ ನೋಡಿ ಖುಷಿಯಾದ ಉಪೇಂದ್ರ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: