ಕೆಂಡ ಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಮಾನ್ವಿತಾ ನೋಡಲು ಕ್ಯೂಟ್ ಆಗಿದ್ದು, ನಟನೆಯಲ್ಲು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ತೆರೆಗೆ ಬಂದ ದುನಿಯಾ ಸೂರಿ ನಿರ್ದೇಶನದ ಕೆಂಡ ಸಂಪಿಗೆ ಮಾನ್ವಿತಾಗೆ ಹೊಸ ಹೆಸರು ತಂದು ಕೊಟ್ಟ ಸಿನಿಮಾವಾಗಿದೆ. ಕರಾವಳಿ ಮೂಲದ ನಟಿ ಮಾನ್ವಿತಾ ಕಾಮತ್ಗೆ ಹುಟ್ಟು ಹಬ್ಬ. ನೆಚ್ಚಿನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸಾಮಾಜಕ ಜಾಲತಾಣದಲ್ಲೂ ನಟಿಯ ಫೋಟೋ ಹಂಚಿಕೊAಡು, ಸ್ಟೇಟಸ್ ಹಾಕಿಕೊಂಡು ಶುಭಾಶಯ ತಿಳಿಸಿದ್ದಾರೆ. ಕೆಂಡ ಸಂಪಿಗೆ ಮಾನ್ವಿತಾಗೆ ಹೆಸರು ತಂದು ಕೊಟ್ಟ ಸಿನಿಮಾವಾಗಿದೆ. ಈ ಸಿನಿಮಾವನ್ನು ಸೂರಿ ನಿರ್ದೇಶನ ಮಾಡಿದ್ದರು. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಮಾನ್ವಿತಾ ಕಾಮತ್ ಸಿನಿಮಾದಲ್ಲಿ ಕಾಣಿಸುತ್ತಿರುವುದು ತೀರಾ ಕಡಿಮೆಯಾಗಿದೆ. ಹಾಗಂದ ಮಾತ್ರಕ್ಕೆ ಸಿನಿ ರಂಗ ಬಿಟ್ಟು ಬೇರೆ ಕಡೆ ಮುಖ ಮಾಡಿದ್ದಾರೆ ಎಂದಲ್ಲ. ಮಾನ್ವಿತಾ ಕಾಮತ್ ಸಿನಿಮಾದಲ್ಲಿ ನಟಿಸೋಕು ಮೊದಲು ಸರಿಯಾದ ಸಿನಿಮಾ ಆಯ್ಕೆ ಮಾಡುವ ಮೂಲಕ ನಟಿಸಲು ಮುಂದಾಗುತ್ತಾರೆ. ತಮಗಿಷ್ಟವಾದ ಪಾತ್ರಗಳ ಆಯ್ಕೆಯ ಮೂಲಕ ನಟಿಸುತ್ತಾ ಬಂದಿದ್ದಾರೆ. ಅಂದಹಾಗೆಯೇ ಈ ನಟಿಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ, ಒಂದೊಂದಾಗಿ ತೆರೆ ಮೇಲೆ ತರಲು ಸಿದ್ಧತೆ ಮಾಡುತ್ತಿದ್ದಾರೆ.
ಅಂದಹಾಗೆಯೇ ಮಂಗಳೂರಿನ ಈ ಕುವರಿ ಪತ್ರಿಕೋದ್ಯಮದ ಮತ್ತು ಇಂಗ್ಲೀಷ್ ಸಾಹಿತಯದಲ್ಲಿ ಪದವಿ ಪಡೆದಿದ್ದಾರೆ. ರೇಡಿಯೋ ಜಾಕಿಯಾಗಿ ಕೂಡ ಮಿಂಚಿದ್ದರು. ಇದರಲ್ಲೇ ವೃತ್ತಿ ಜೀವನ ಆರಿಸಿದ್ದ ಮಾನ್ವಿತಾಗೆ ಸಿನಿ ರಂಗ ಕೈಬೀಸಿ ಕರೆಯಿತು. ಹಾಗಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ಅವರು ಕೆಂಡ ಸಂಪಿಗೆ ಸಿನಿಮಾದ ಮೂಲಕ ಬಣ್ಣ ಹಚ್ಚಿದರು. ದುನಿಯ ಸೂರಿ ಅವರ ಕೆಂಡ ಸಂಪಿಗೆ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ಮಾನ್ವಿತಾಗೆ ಈ ಸಿನಿಮಾದಲ್ಲಿ ಸೈಮಾ ಪ್ರಶಸ್ತಿ ಲಭಿಸುತ್ತದೆ. ನಂತರ ಕನ್ನಡದ ಹಲವು ಸಿನಿಮಾದಲ್ಲಿ, ಅಷ್ಟೇ ಏಕೆ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ ಮಾನ್ವಿತಾ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada