ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿ ಜಾತ್ರೆಯ ಎರಡನೇ ದಿನವಾದ ಇಂದು ದೇವಿಯನ್ನು ಮಾರಿ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ.ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಬರುತ್ತಿದ್ದು, ಹರಕೆ ತೀರಿಸಿ,ಪೂಜೆ ಸಲ್ಲಿಸಿ ಪುನೀತರಾದರು.ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನದ ಮಾರಿ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.ಬೆಳಿಗ್ಗೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನಗರದ ವಿವಿಧೆಡೆಯಿಂದ ಜನರು ಕಾಲ್ನಡಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆದ್ದು. ಬೇವಿನ ಉಡುಗೆ ತೊಟ್ಟು ಬಂದು ದೇವಿಗೆ ಹರಕೆ ತೀರಿಸಿದರು.ಬೇವಿನ ಉಡುಗೆ ತೆಗೆದಿರಿಸಲು ದೇಗುಲದ ಮುಂದೆಯೇ ಅವಕಾಶ ಕಲ್ಪಿಸಲಾಗಿತ್ತು.ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ನೂಕುನುಗ್ಗಲು ತಗ್ಗಿಸಲು ಈ ಬಾರಿ ದೇವಸ್ಥಾನದ ಸುತ್ತಮುತ್ತ ಯಾವುದೇ ಅಂಗಡಿಗಳಿಗೆ ಅವಕಾಶ ಕಲ್ಪಿಸಿಲ್ಲ.ಹಾಗಾಗಿ ಜನ ಸಂಚಾರ ಸುಗಮವಾಗಿದೆ.ದೇವಸ್ಥಾನದ ಒಳಗೆ ಸರತಿಯಲ್ಲಿ ಜನರು ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada