ಮತ್ತೆ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಸ್ಯಾಮ್ – ಚೈತನ್ಯ.

ಮತ್ತೆ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಸಮಂತಾ – ನಾಗಚೈತನ್ಯ..!!!

10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..  ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..

ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು.. ಅವರ ಆಸೆ ಕನಸಿಗೆ ಈಗ ಹೊಸ ಭರವಸೆಯಂತೆ ಒಂದು ಸೆನ್ಷೇಷನಲ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಾರೀ ಸೌಂಡ್ ಮಾಡ್ತಿದೆ..

ಅದೇನೆಂದ್ರೆ ಈ ಈ ಸೂಪರ್ ಹಿಟ್ ಆನ್ ಸ್ಕ್ರೀನ್ ಜೋಡಿ ಮತ್ತೆ ಸಿನಿಮಾಗೆ ಒಂದಾಗುತ್ತಿದ್ದಾರೆ ಅನ್ನೋದು.. ಹೌದು.. ನಂದಿನಿ ರೆಡ್ಡಿ ನಿರ್ದೇಶನದ `ಓ ಬೇಬಿ’ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಚಿತ್ರದಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಆ ಸಂದರ್ಭದಲ್ಲೇ ನಂದಿನಿ ರೆಡ್ಡಿ, ಹೊಸ ಸ್ಕ್ರೀಪ್ಟ್‌ ಬಗ್ಗೆ ಹೇಳಿಕೊಂಡಿದ್ದರಂತೆ.. ಕಟೆಂಟ್ ಕೇಳಿ ಆಗ ಸ್ಯಾಮ್ ಮತ್ತು ಚೈ ಸಿನಿಮಾ ಒಪ್ಪಿದ್ದರಂತೆ.. ಈ ಪ್ರಾಜೆಕ್ಟ್ ಈಗ ಕೈಗೆತ್ತುಕೊಳ್ಳಲು ಯೋಜಿಸಿರುವ ನಂದಿನಿ ಅವರು ಮತ್ತೆ ಈ ಜೋಡಿಯನ್ನ ತೆರೆ ಮೇಲೆ ಒಂದಾಗಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗ್ತಿದೆ..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಮುಖದ ಕಾಂತಿ ಹೆಚ್ಚಿಸಲು ಬಳಸಿ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್.!

Tue Apr 5 , 2022
ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಸೇರಿಸಿ. ಅದನ್ನು ಒಟ್ಟಿಗೆ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ಮೊಸರನ್ನು ಮಿಶ್ರಣ ಮಾಡಿ. ಇದನ್ನು ಒಟ್ಟಿಗೆ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ರಿಂದ 20 ನಿಮಿಷ ಬಿಟ್ಟು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಒಂದು ಚಮಚ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: